ನೆಲ್ಲೂರಿನಲ್ಲಿ ಲಾರಿ ಪಲ್ಟಿ: ರಕ್ಷಣೆಗೆ ಬರುವ ಬದಲು; ಸಾಫ್ಟ್ ಡ್ರಿಂಕ್ಸ್ ಕದ್ದ ಜನ; ವಿಡಿಯೋ ವೈರಲ್​! Nellore Lorry Accident Bottle Loot

ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಸಾಫ್ಟ್ ಡ್ರಿಂಕ್ಸ್ ಲಾರಿಗೆ ಅಪಘಾತ
ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಸಾಫ್ಟ್ ಡ್ರಿಂಕ್ಸ್ ಲಾರಿಗೆ ಅಪಘಾತ
Published on

ಪ್ರಮುಖ ಮುಖ್ಯಾಂಶಗಳು

  • ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಸಾಫ್ಟ್ ಡ್ರಿಂಕ್ಸ್ ಲಾರಿಗೆ ಅಪಘಾತ
  • ಚಾಲಕ ಸಹಾಯಕನ ರಕ್ಷಣೆಗೆ ಬರದ ಜನ
  • ಸಾಫ್ಟ್ ಡ್ರಿಂಕ್ಸ್ ಬಾಟಲಿ ಎತ್ತಿ ಓಡಿದ ಸಾರ್ವಜನಿಕರು
ನೆಲ್ಲೂರು: ಭಾರತ ಇನ್ನೇನು ಕಲವೇ ವರ್ಷಗಳಲ್ಲಿ ಮೂರನೇ ಅತೀ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ನಮ್ಮ ಪ್ರಧಾನಿಗಳು ಹೇಳುತ್ತಾರೆ. ಆದರೆ ನಮ್ಮ ಜನರ ನಾಗರಿಕ ಪ್ರಜ್ಞೆ ಮಾತ್ರ ಇನ್ನೂ ಮೂರನೇ ದರ್ಜೆಯಲ್ಲಿದೆ ಎಂದರೆ ತಪ್ಪಾಗಲಾರದು.

ಲಾರಿ ಪಲ್ಟಿ; ಬಾಟಲಿ ಲೂಟಿ!

ಗುರುವಾರ (ಮಾರ್ಚ್​ 19) ರಂದು ಆಂಧ್ರಪ್ರದೇಶದ ನೆಲ್ಲೂರಿಲ್ಲಿ ಮುಂಜಾನೆ ಸಾಪ್ಟ್​ ಡ್ರಿಂಕ್ಸ್​ಗಳನ್ನು ಕೊಡೊಂಯ್ಯುತ್ತಿದ್ದ ಲಾರಿಯೊಂದು ಅಫಘಾತಕ್ಕಿಡಾಗಿದೆ (Nellore Lorry Accident Bottle Loot). ಆದರೆ ಸ್ಥಳದಲ್ಲಿದ್ದ ಜನರು ಲಾರಿ ಚಾಲಕ ಹಾಗೂ ಸಹಾಯಕನ ರಕ್ಷಣೆಗೆ ಬರುವ ಬದಲು ರಸ್ತೆಯಲ್ಲಿ ಬಿದ್ದಿದ್ದ ಸಾಪ್ಟ್​ ಡ್ರಿಂಕ್ಸ್​ ಬಾಟಲ್​ಗಳನ್ನು ಹೊತ್ತೊಯ್ಯುವುದರಲ್ಲಿ ನಿರತರಾಗಿದ್ದಾರೆ.
ಇದನ್ನು ನೋಡಿದ ಲಾರಿ ಚಾಲಕ ಮತ್ತು ಸಹಾಯಕ, ದಯವಿಟ್ಟು ಬಾಟಲಿಗಳನ್ನು ತೆಗೆದುಕೊಂಡು ಹೋಗಬೇಡಿ, ನಾವು ಇದನ್ನು ನಿಗಧಿತ ಸ್ಥಳಕ್ಕೆ ತಲುಪಿಸಬೇಕು ಎಂದು ಹೇಳಿದರೂ ಜನ ಕ್ಯಾರೆ ಎನ್ನದೇ ಬಾಟಲಿಗಳನ್ನು ಎರಡೂ ಕೈಗಳಲ್ಲಿ ಬಾಚುತ್ತಿರುವುದನ್ನು ವಿಡಿಯೋನಲ್ಲಿ ನೋಡಬಹುದಾಗಿದೆ.

ಪೊಲೀಸರ ಆಗಮನ; ಜನ ಪರಾರಿ

ಈ ರೀತಿಯ ಘಟನೆ ನಡೆಯುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ದೊರೆತ ಕೂಡಲೇ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರ ಜೀಪ್​ ಸ್ಥಳಕ್ಕೆ ಬರುತ್ತಿದ್ದಂತೆ ಬಾಟಲಿಗಳನ್ನು ಬಾಚುತ್ತಿದ್ದ ಜನ ಓಡಿ ಹೋಗಿದ್ದಾರೆ.

ನೆಟ್ಟಿಗರು ಏನಂತಾರೆ?

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ನಂತರ, ವಿವಿಧ ರೀತಿಯ ಕಮೆಂಟ್​ಗಳು ಬಂದಿವೆ. ಪಾಪ ಆ ಲಾರಿ ಚಾಲಕನಿಗೆ ಸಹಾಯ ಮಾಡುವ ಬದಲು ಜನ ಈ ರೀತಿ ಬಾಟಲಿಗಳನ್ನು ಕದ್ದಿರುವುದು ನಾಚಿಕೆಯ ಸಂಗತಿಯಾಗಿದೆ ಎಂದು ಒಬ್ಬ ಬಳಕೆದಾರ ಬರೆದರೆ, ನಮ್ಮ ಜನರಿಗೆ ಏನೇ ಸೌಲಭ್ಯ ನೀಡಿ ಆದರೆ ಅವರ ಈ ನೀಚ ಬುದ್ಧಿ ಯಾವತ್ತಿಗೂ ಹೋಗುವುದಿಲ್ಲ ಎಂದು ಮತ್ತೊಬ್ಬ ಬಳಕೆದಾರ ಬರೆದಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net