ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಸಿಬಿಐ ಬಲೆಗೆ ಭೌತಶಾಸ್ತ್ರ ಉಪನ್ಯಾಸಕಿ; ಕೆಲಸದಿಂದ ಕಿತ್ತೊಗೆದ ಕಾಲೇಜು ಮಂಡಳಿ! NEET Paper Leak

ಮಹಾರಾಷ್ಟ್ರದ ಭೌತಶಾಸ್ತ್ರ ಉಪನ್ಯಾಸಕಿ ಮನೀಶಾ ಸಂಜಯ್ ಹವಾಲ್ದಾರ್ ಸಿಬಿಐ ವಶಕ್ಕೆ
ಮಹಾರಾಷ್ಟ್ರದ ಭೌತಶಾಸ್ತ್ರ ಉಪನ್ಯಾಸಕಿ ಮನೀಶಾ ಸಂಜಯ್ ಹವಾಲ್ದಾರ್ ಸಿಬಿಐ ವಶಕ್ಕೆ
Published on

ಪ್ರಮುಖ ಮುಖ್ಯಾಂಶಗಳು

  • ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ
  • ಮಹಾರಾಷ್ಟ್ರದ ಭೌತಶಾಸ್ತ್ರ ಉಪನ್ಯಾಸಕಿ ಮನೀಶಾ ಸಂಜಯ್ ಹವಾಲ್ದಾರ್ ಸಿಬಿಐ ವಶಕ್ಕೆ
  • ಕೆಲಸದಿಂದ ವಜಾ ಮಾಡಿದ ಕಾಲೇಜು ಆಡಳಿತ ಮಂಡಳಿ
ಮಹಾರಾಷ್ಟ್ರ: ದೇಶದಲ್ಲಿ ಸಂಚಲಕ್ಕೆ ಕಾರಣವಾಗಿರು ನೀಟ್​ ಪೇಪರ್​ ಸೋರಿಕೆ (NEET Paper Leak) ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ಮಹಾರಾಷ್ಟ್ರದ ಭೌತಶಾಸ್ತ್ರ ಉಪನ್ಯಾಸಕಿ ಮನೀಶಾ ಸಂಜಯ್ ಹವಾಲ್ದಾರ್ ಎಂಬಾಕೆಯನ್ನು ಈಗ ಕೆಲಸದಿಂದ ವಜಾ ಮಾಡಲಾಗಿದೆ.
ಮಹಾರಾಷ್ಟ್ರದ ಸೇಠ್ ಹೀರಾಲಾಲ್ ಸರಸ್ವತಿ ಪ್ರಶಾಲಾದಲ್ಲಿ ಭೌತಶಾಸ್ತ್ರದ ವಿಷಯದ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಮನೀಶಾ ಹವಾಲ್ದಾರ್ ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಪಾತ್ರವಹಿಸಿದ್ದ ಹಿನ್ನಲೆ ಸಿಬಿಐನಿಂದ​ ಬಂಧನವಾದ ನಂತರ ಕೆಲಸದಿಂದ ವಜಾ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿಗಳಿಗೆ ದ್ರೋಹ ಮಾಡಿದ್ದಾಳೆ!

ಮನೀಶಾ ಸಂಜಯ್ ಹವಾಲ್ದಾರ್​ನ್ನು ಕೆಲಸದಿಂದ ವಜಾ ಮಾಡಿರುವ ಬಗ್ಗೆ ಮಾತನಾಡಿದ, ಮಹಾರಾಷ್ಟ್ರದ ಸೇಠ್ ಹೀರಾಲಾಲ್ ಸರಸ್ವತಿ ಪ್ರಶಾಲಾದ ಕಾರ್ಯದರ್ಶಿ ಡಾ. ಸತೀಶ್ ಗಾವ್ಡೆ, ಮನೀಶಾ ನಮ್ಮ ವಿದ್ಯಾನಿಲಯದಲ್ಲಿ 1992 ರಿಂದ ಕೆಲಸ ಮಾಡುತ್ತಿದ್ದಾಳೆ. ಅದರೆ ಇಕೆ ನೀಟ್​ ಪೇಪರ್​ ಸೋರಿಕೆಯಲ್ಲಿ ಪಾಲ್ಗೊಂಡಿರುವುದು ನಾಚಿಕೆಯ ಸಂಗತಿಯಾಗಿದೆ. ಅಷ್ಟೇ ಅಲ್ಲದೆ ಇದು ವಿದ್ಯಾರ್ಥಿಗಳಿಗೆ ಮಾಡಿದ ದ್ರೋಹವಾಗಿದೆ ಎಂದು ಅವರು ಹೇಳಿದ್ದಾರೆ.
ನಮಗೆ ಅವಳನ್ನು ಯಾರು, ಯಾವಾಗ ನೀಟ್​ ಪರೀಕ್ಷೆ ಪ್ರಕ್ರಿಯೆಯಲ್ಲಿ ಸೇರಿಸಿದ್ದರು ಎಂಬ ಮಾಹಿತಿಯಿಲ್ಲ. ಹಾಗೆಯೇ ಇವಳು ಎನ್​ಟಿಎ ಮೂಲಕ ನೇಮಕವಾದ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಸದಕ್ಕಾಗಿ ನಾವು ಉನ್ನತ ಮಟ್ಟದ ತನಿಖೆಯನ್ನು ನಡೆಸುತ್ತಿದ್ದು, ಸದ್ಯ ಮನೀಶಾಳನ್ನು ಕೆಲಸದಿಂದ ವಜಾಮಾಡಿದ್ದೆವೆ ಎಂದು ಡಾ. ಸತೀಶ್​ ತಿಳಿಸಿದ್ದಾರೆ.
ನೀಟ್ ಪರೀಕ್ಷೆ ರದ್ದು
ರಾಜಸ್ಥಾನದಲ್ಲಿ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಹಿನ್ನೆಲೆ ಮೇ3 ರಂದು ನಡೆಸಲಾದ ಯುಜಿ ನೀಟ್ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಇದೀಗ ರದ್ದುಗೊಳಿಸಿದೆ.
ರಾಜಸ್ಥಾನದ ಸೀಕರ್ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಹಿನ್ನೆಲೆ ಮರು ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಪರೀಕ್ಷೆ ಬರೆದಿದ್ದ 22,05,035 ವಿದ್ಯಾರ್ಥಿಗಳಿಗೆ ಇದರಿಂದ ಆಘಾತ ಎದುರಾದರೂಯಾವ ವಿದ್ಯಾರ್ಥಿಗೂ ಅನ್ಯಾಯವಾಗದಿರಲಿ ಎಂಬ ನಿಟ್ಟಿನಲ್ಲಿ ಸದ್ಯ ಎನ್ಟಿಎ ಈ ನಿರ್ಧಾರವನ್ನು ಕೈಗೊಂಡಿದ್ದು, ಸೋರಿಕೆಯ ಪ್ರಕರಣವನ್ನು ಗಮನಿಸಿದ ಕೇಂದ್ರ ಸರ್ಕಾರ ಸಿಬಿಐಗೆ ತನಿಖೆ ನಡೆಸುವಂತೆ ಆದೇಶಿಸಿದೆ, (ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net