ಎನ್​ಸಿಪಿ ಮ್ಯಾರಥಾನ್ ಮಾತುಕತೆ ವಿಫಲ..? ಅಜಿತ್​​ರ ಈ​ ಒಂದು ಪ್ರಸ್ತಾಪದಿಂದ ಮನಸ್ಸು ಬದಲಿಸಿದರಾ ಶರದ್​ ಪವಾರ್..?​ | NCP Factions Fail

NCP Factions Fail | ಅಜಿತ್ ಪವಾರ್ ಮತ್ತು ಶರದ್​ ಪವಾರ್
NCP Factions Fail | ಅಜಿತ್ ಪವಾರ್ ಮತ್ತು ಶರದ್​ ಪವಾರ್
Published on
ಮುಂಬೈ: ಅನೇಕ ಸುತ್ತಿನ ಮಾತುಕತೆಗಳ ಬಳಿಕವೂ, ಪುಣೆ ಮತ್ತು ಪಿಂಪ್ರಿ-ಚಿಂಚ್‌ವಾಡ್‌ನ ಪುರಸಭೆ ಚುನಾವಣೆಗಳಲ್ಲಿ ಒಟ್ಟಾಗಿ ಸ್ಪರ್ಧಿಸಲು ನಡೆದ ಎನ್‌ಸಿಪಿ ಎರಡು ಬಣಗಳು ಮೈತ್ರಿ ಮಾತುಕತೆಗಳು ವಿಫಲವಾಗಿವೆ ಎಂದು ಮೂಲಗಳು ತಿಳಿಸಿವೆ.
ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ, ಶರದ್​ ಬಣದೊಂದಿಗೆ ಕೈ ಜೋಡಿಸಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಲು ಮನಸ್ಸು ಮಾಡಿತ್ತು, ಆದರೆ ಕಳೆದ ಕೆಲವು ದಿನಗಳಿಂದ ಎರಡೂ ಬಣಗಳ ಸಭೆಯಲ್ಲಿ ಮಾತುಕತೆಗಳು ನಡೆದರು ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಎನ್‌ಸಿಪಿ-ಎಸ್‌ಪಿಯ ಎಲ್ಲಾ ಅಭ್ಯರ್ಥಿಗಳು ತಮ್ಮ ಗಡಿಯಾರ ಚಿಹ್ನೆಯ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಷರತ್ತನ್ನು ಅಜಿತ್​ ಬಣ ಮುಂದಿಟ್ಟಿತ್ತು ಎನ್ನಲಾಗಿದ್ದು, ಆದರೆ ಶರದ್ ಬಣಕ್ಕೆ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಮೂಲಗಳ ಪ್ರಕಾರ ಇದಕ್ಕೆ ಎನ್‌ಸಿಪಿ-ಎಸ್‌ಪಿ ಬಣ ಅಜಿತ್ ಪವಾರ್ ಪಕ್ಷಕ್ಕೆ ತನ್ನ ಅಭ್ಯರ್ಥಿಗಳು ಕಹಳೆ ಚಿಹ್ನೆಯ ಮೇಲೆ ಮಾತ್ರ ಸ್ಪರ್ಧಿಸುತ್ತಾರೆ ಎಂದು ತಿಳಿಸಿದೆ.
ಈ ವಿಷಯವಾಗಿ ಮ್ಯಾರಥಾನ್ ಮೀಟಿಂಗ್ ನಡೆದರೂ ಎರಡೂ ಬಣಗಳು ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದ್ದು, ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಶುಕ್ರವಾರ ರಾತ್ರಿ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಶರತ್​ ಬಣದ ನಾಯಕ ಅಜಮ್ ಪನ್ಸಾರೆಯನ್ನು ಭೇಟಿ ಮಾಡಿ ಮೈತ್ರಿ ಸಾಧ್ಯತೆಯ ಬಗ್ಗೆ ಚರ್ಚಿಸಿದ್ದಾರೆ ಎನ್ನುವುದು ಇಲ್ಲಿ ಗಮನಾರ್ಹ ಸಂಗತಿ.
ಬಹಳ ದಿನಗಳ ನಂತರ ಅಜಿತ್ ಪವಾರ್ ನನ್ನನ್ನು ಭೇಟಿಯಾಗಲು ಬಂದಿದ್ದಾರೆ, ಸಾಮಾನ್ಯ ವಿಷಯಗಳ ಕುರಿತು ನಾವು ಸಾಕಷ್ಟು ಚರ್ಚೆ ನಡೆಸಿದ್ದೇವೆ. ಎರಡು ಬಣಗಳ ಮಧ್ಯೆ ಮೈತ್ರಿ ಮಾಡಿಕೊಳ್ಳಬೇಕು ಎನ್ನುವುದು ನಮ್ಮ ಬಯಕೆಯಾಗಿದ್ದು, ಈ ವಿಷಯವಾಗಿ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನನಗೆ ಹೇಳಿದ್ದಾರೆ ಎಂದು ಪನ್ಸಾರೆ ತಿಳಿಸಿದರು.
2024 ರ ಲೋಕಸಭಾ ಚುನಾವಣೆಗೂ ಮುನ್ನ ಅಜಿತ್ ಪವಾರ್ ಅನೇಕ ಶಾಸಕರೊಂದಿಗೆ ಎನ್‌ಡಿಎ ಮೈತ್ರಿಕೂಟ ಸೇರಿದ ಬಳಿಕ ಎನ್‌ಸಿಪಿ ಇಬ್ಬಾಗವಾಯಿತು. ಸಂಖ್ಯಾಬಲದ ಆಧಾರದ ಮೇಲೆ ಕೇಂದ್ರ ಚುನಾವಣಾ ಆಯೋಗ ಅಜಿತ್ ಪವಾರ್ ಬಣವನ್ನು ನಿಜವಾದ ಎನ್‌ಸಿಪಿ ಎಂದು ಘೋಷಿಸಿ, ಗಡಿಯಾರದ ಚಿಹ್ನೆಯನ್ನು ನೀಡಿತು.
ಎನ್‌ಸಿಪಿ ಪುನರ್ಮಿಲನದ ದೇಶದ ಗಮ ಸೆಳೆದಿದ್ದು, ಶರದ್ ಪವಾರ್ ನಿರ್ಧಾರವನ್ನು ಸ್ವಾಗತಿಸುವುದಾಗಿ ಕಾಂಗ್ರೆಸ್ ಹೇಳಿಕೊಂಡರೆ. ಇತ್ತ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಕೂಡ ಇದೇ ರೀತಿಯ ಹೇಳಿಕೆಯನ್ನು ನೀಡಿದೆ. ಮಹಾರಾಷ್ಟ್ರ ಮಹಾನಗರ ಪಾಲಿಕೆ ಚುನಾವಣೆಗೆ ಜನವರಿ 15 ರಂದು ಮತದಾನ ನಡೆಯಲಿದ್ದು, ಜನವರಿ 16 ರಂದು ಫಲಿತಾಂಶ ಹೊರಬೀಳಲಿದೆ(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net