ಕೈಕೊಟ್ಟ ಎನ್​ಸಿಪಿ ಬಣಗಳ ಮೈತ್ರಿ; ಪುಣೆ, ಪಿಂಪ್ರಿ-ಚುಂಚವಾಡ್​ ಪಾಲಿಕೆಯಲ್ಲಿ ಬಿಜೆಪಿಗೆ ಬಹುಮತ; ಎನ್​ಸಿಪಿ ಕೈ ತಪ್ಪಿದ ಪಾಲಿಕೆ | BMC Elections

ಶರದ್ ಪವಾರ್, ಸಿಎಂ ಫಡ್ನವೀಸ್, ಡಿಸಿಎಂ ಅಜಿತ್ ಪವಾರ್
ಶರದ್ ಪವಾರ್, ಸಿಎಂ ಫಡ್ನವೀಸ್, ಡಿಸಿಎಂ ಅಜಿತ್ ಪವಾರ್
Published on
ಪುಣೆ: ಮಹರಾಷ್ಟ್ರದ ಬೃಹನ್ಮುಂಬೈ ಸೇರಿ 28 ಪುರಸಭೆಗಳ ಚುನಾವಣಾ ಮತ ಎಣಿಕೆ ಮುಂದುವರೆದಿದ್ದು, ಪುಣೆ ಮಹಾನಗರ ಪಾಲಿಕೆ, ಪಿಂಪ್ರಿ-ಚುಂಚ್​ವಾಡ ಪುರಸಭೆಯಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದ್ದು, ಪಾಲಿಕೆ ಮತ್ತು ಪುರಸಭೆಯಲ್ಲಿ ಬಹುಮತದತ್ತ ಮುನ್ನಡೆ ಸಾಧಿಸಿದೆ.
ಚುನಾವಣೆಗೂ ಮುನ್ನ ಒಡೆದು ಹೋಗಿದ್ದ ನ್ಯಾಷ್​ನಲಿಷ್ಟ್ ಕಾಂಗ್ರೆಸ್ ಪಕ್ಷದ(ಎನ್​ಸಿಪಿ) ಬಣಗಳು ಪಾಲಿಕೆಯಲ್ಲಿ ಅಧಿಕಾರವನ್ನು ಹಿಡಿಯಲು ಮತ್ತೆ ಒಂದಾಗಿದ್ದವು. ಡಿಸಿಎಂ ಅಜಿತ್ ಪವಾರ್ ನೇತೃತ್ವದ ಎನ್​ಸಿಪಿ, ಶರದ್ ಪವಾರ್ ನೇತೃತ್ವದ ಎನ್​ಸಿಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ತಿರುಗುಬಾಣವಾಗಿದೆ.
ಪುಣೆ ಪಾಲಿಕೆಯಲ್ಲಿ 190 ಸ್ಥಾನಗಳ ಪೈಕಿ ಬಿಜೆಪಿಯೊಂದೆ 90 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಜಿತ್ ಪವಾರ್ ಅವರ ಎನ್​ಸಿಪಿ ಕೇವಲ 20 ಸ್ಥಾಗಳಲ್ಲಿ ಮುನ್ನಡೆ ಸಾಧಿಸಿದ್ರೆ ಕಾಂಗ್ರೆಸ್ 8 ಸ್ಥಾನಗಳಲ್ಲಿ, ಶಿವಸೇನಾ ಬಣಗಳು ತಲಾ 2 ಸ್ಥಾನಗಳಲ್ಲಿ ಮುಂದಿವೆ.
ಹಾಗೆ ಪಿಂಪ್ರಿ-ಚುಂಚ್​ವಾಡ ಪುರಸಭೆಯಲ್ಲಿ 128 ಸ್ಥಾನಗಳ ಪೈಕಿ ಬಿಜೆಪಿಯೊಂದೆ 81 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಶಿಂಧೆ ಶಿವಸೇನಾ 9, ಅಜಿತ್ ಪವಾರ್ ಅವರ ಎನ್​ಸಿಪಿ 36 ಸ್ಥಾನಗಳಲ್ಲಿ, ಶರದ್ ಪವಾರ್ ಅವರ ಎನ್​ಸಿಪಿ ಕೇವಲ 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಕಳೆದ ಕೆಲವು ವರ್ಷಗಳಿಂದ  ಅವಿಭಜಿತ ಎನ್​ಸಿಪಿ ಪಕ್ಷದ ಹಿಡಿತದಲ್ಲಿದ್ದ ಪುಣೆ ಮಹಾನಗರ ಪಾಲಿಕೆ, ಪಿಂಪ್ರಿ-ಚುಂಚ್​ವಾಡ ಪುರಸಭೆ ಅವರ ಕೈ ಜಾರಿ ಬಿಜೆಪಿ ತೆಕ್ಕೆಗೆ ಜಾರಿದೆ. 2017ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅವಿಭಜಿತ ಎನ್​ಸಿಪಿ ಗೆಲುವು ಸಾದಿಸಿ ಅಧಿಕಾರಕ್ಕೇರಿತ್ತು. ಐದು ವರ್ಷಗಳ ಅವಧಿ ಮುಗಿಯೋದರೊಳಗೆ ಎನ್​ಸಿಪಿ ಇಬ್ಬಾಗವಾಗಿತ್ತು. 
ಡಿಸಿಎಂ ಅಜಿತ್ ಪವಾರ್ ಅವರು ಎನ್​ಸಿಪಿಯಿಂದ ಆಚೆ ಬಂದ ಬಳಿಕ ನಡೆದ ಚುನಾವಣೆ ಇದಾಗಿದೆ. ಗುರುವಾರ(ಜ. 15) ಮುಂಬೈ ಮಹಾನಗರ ಪಾಲಿಕೆ ಸೇರಿ 28 ನಗರಸಭೆ, ಪುರಸಭೆಗಳಲ್ಲಿ ಮತದಾನ ನಡೆದಿತ್ತು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net