'ಔಟ್​ ಆಫ್​ ಸ್ಟಾಕ್'​ ಬೋರ್ಡ್​ಗಳ ಮಧ್ಯೆ ದಿಢೀರ್​ ಪೆಟ್ರೋಲ್​-ಡಿಸೇಲ್​ ಬೆಲೆ ಹೆಚ್ಚಿಸಿದ ನಯಾರಾ ಕಂಪನಿ

ಪೆಟ್ರೋಲ್ ಬಂಕ್​
ಪೆಟ್ರೋಲ್ ಬಂಕ್​
Published on

ಪ್ರಮುಖ ಮುಖ್ಯಾಂಶಗಳು

  • ಇಸ್ರೇಲ್​-ಅಮೆರಿಕ ಯುದ್ಧದಿಂದ ತೈಲ ಬಿಕ್ಕಟ್ಟು
  • ಔಟ್​ ಆಫ್​ ಸ್ಟಾಕ್​ ಬೋರ್ಡ್​ಗಳ ಮಧ್ಯೆ ದಿಢೀರ್ ಇಂಧನ ಬೆಲೆ ಏರಿಕೆ
  • ನಯಾರ ಸಂಸ್ಥೆಯಿಂದ ಬೆಲೆ ಏರಿಕೆಯ ನಿರ್ಧಾರ
Petrol Price Hike: ಇಸ್ರೇಲ್​-ಇರಾನ್​ ಯುದ್ಧದಿಂದ ಮಧ್ಯಪ್ರಾಚ್ಯ ತೀವ್ರ ಉದ್ವಿಗ್ನೊಂಡಿದ್ದು, ಹಾರ್ಮುಜ್​ ಜಲಸಂಧಿ ಕ್ಲೋಸ್​ ಆಗಿದೆ. ಭಾರತ ಸೇರಿದಂತೆ ಕೆಲವೇ ಕೆಲವು ದೇಶಗಳ ತೈಲ ಹಡಗುಗಳಿಗೆ ಇರಾನ್​ ಗ್ರೀನ್​ ಸಿಗ್ನಲ್​ ಕೊಟ್ಟಿದ್ದೇ ಆದರೂ ದೇಶದಲ್ಲಿ ಗ್ಯಾಸ್​ ಬಿಕ್ಕಟ್ಟು ಮತ್ತು ಇಂಧನ ಪರಿಸ್ಥಿತಿ ಸುಧಾರಣೆ ಆಗಿದೆ ಎನ್ನುವಂತೆ ತೋರುತ್ತಿಲ್ಲ. ಇದಕ್ಕೆ ಹಲವು ಬೆಳವಣಿಗೆಗಳೇ ಜ್ವಲಂತ ಸಾಕ್ಷಿ.
ಕೇಂದ್ರ ಸರ್ಕಾರ ಗ್ಯಾಸ್​ ಸಿಲಿಂಡರ್​ಗಳ ಸ್ಟಾಕ್​ ನಮ್ಮಲ್ಲಿದೆ. ಅದರ ಅಭಾವ ಇನ್ನೂ ಕಾಡಿಲ್ಲ. ಮತ್ತೊಂದೆಡೆ, ಇಂಧನ ಕೂಡ ಕೊರತೆಯಾಗಿಲ್ಲ. ಜನರು ಈ ವಿಷಯದ ಬಗ್ಗೆ ಆತಂಕ ಪಡುವುದು ಬೇಡ ಮತ್ತು ಬಂಕ್​ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಪೆಟ್ರೋಲ್​-ಡಿಸೇಲ್​ ಹಾಕಿಸಿಕೊಳ್ಳುವ ಜಟಾಪಟಿಯೂ ಬೇಡ ಎಂದು ತಿಳಿಸಿದೆ. ಇಷ್ಟಾದರೂ ಸಹ ಹಲವು ಬಂಕ್​ಗಳಲ್ಲಿ ಔಟ್​ ಆಫ್​ ಸ್ಟಾಕ್​ ಎಂಬ ಬೋರ್ಡ್​ಗಳು ಕಾಣತೊಡಗಿವೆ. ಇದರ ಮಧ್ಯೆಯೇ, ನಯಾರಾ ಎನರ್ಜಿ ಸಂಸ್ಥೆಯಿಂದ ಇಂಧನ ಬೆಲೆಯನ್ನು ದಿಢೀರ್ ಹೆಚ್ಚಿಸಲಾಗಿದೆ. 
ಪಾಕಿಸ್ತಾನ, ನೇಪಾಳ ಮತ್ತು ಶ್ರೀಲಂಕಾದಂತಹ ದೇಶಗಳಲ್ಲಿ ಈಗಾಗಲೇ ಇಂಧನ ಕೊರತೆ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದ್ದು, ಅಮೆರಿಕ-ಇಸ್ರೇಲ್​ ಮತ್ತು ಇರಾನ್​ ನಡುವಿನ ಯುದ್ಧ ಕೊನೆಗೊಳ್ಳದ ಹಿನ್ನೆಲೆ ನಯಾರಾ ಸಂಸ್ಥೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಸಿದೆ ಎಂದು 'ಹಿಂದೂಸ್ಥಾನ ಟೈಮ್ಸ್'​ ತನ್ನ ವರದಿಯಲ್ಲಿ ತಿಳಿಸಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ನೂತನ ದರವು ಶುಕ್ರವಾರ (ಮಾ.27) ದೇಶಾದ್ಯಂತ ಜಾರಿಗೆ ಬರಲಿದೆ ಎಂದು ತಿಳಿಸಿದೆ.

ಪ್ರಸ್ತುತ ಪೆಟ್ರೋಲ್​ ದರ ಎಷ್ಟಿದೆ?  (ಪ್ರಮುಖ ರಾಜ್ಯಗಳು)

  • ಹೈದರಾಬಾದ್ 107.46 ರೂ. (ಪ್ರತಿ ಲೀ)
  • ಕೋಲ್ಕತ 105.41 ರೂ.
  • ಮುಂಬೈ 103.54 ರೂ.
  • ಬೆಂಗಳೂರು 102.92 ರೂ.
  • ಭುವನೇಶ್ವರ 101.19 ರೂ.
  • ಚೆನ್ನೈ 100.80 ರೂ. 
  • ಗುರಗಾಂವ್ 95.57 ರೂ. 
  • ನೋಯ್ಡಾ 95.16 ರೂ. 

ಪ್ರಸ್ತುತ ಡಿಸೇಲ್​ ದರ ಎಷ್ಟಿದೆ? (ಪ್ರಮುಖ ರಾಜ್ಯಗಳು)

  • ಹೈದರಾಬಾದ್ 95.70 ರೂ. (ಪ್ರತಿ ಲೀ) 
  • ಭುವನೇಶ್ವರ 92.77 ರೂ. 
  • ಚೆನ್ನೈ 92.39 ರೂ.  
  • ಕೋಲ್ಕತ 92.02 ರೂ. 
  • ಬೆಂಗಳೂರು 90.99 ರೂ. 
  • ಮುಂಬೈ 90.03 ರೂ. 
  • ನೋಯ್ಡಾ 88.31 ರೂ.
ಕಂಪನಿಯು ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 5.30 ರೂ. ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 3 ರೂ. ಹೆಚ್ಚಿಸಿದೆ. ದೇಶಾದ್ಯಂತ ಸುಮಾರು 6,500ಕ್ಕೂ ಅಧಿಕ ಪೆಟ್ರೋಲ್ ಪಂಪ್‌ಗಳನ್ನು ಹೊಂದಿರುವ ನಯಾರಾ ಸಂಸ್ಥೆ, 2025ರಲ್ಲಿ 450,000 ಟನ್ ಪಾಲಿಪ್ರೊಪಿಲೀನ್ ಸ್ಥಾವರದೊಂದಿಗೆ ಪೆಟ್ರೋಕೆಮಿಕಲ್ಸ್ ವಲಯವನ್ನು ಪ್ರವೇಶಿಸಿತು. ಈ ಮೊದಲು ಎಸ್ಸಾರ್​ ಆಯಿಲ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಂಪನಿ, ಈಗ ನಯಾರಾ ಎನರ್ಜಿ ಆಗಿ ಬೆಳೆದು ನಿಂತಿದೆ,(ಏಜೆನ್ಸೀಸ್).  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net