ಮತಾಂತರ ಹಾಗೂ ಮರುಮತಾಂತರದ ಅವಾಂತರಕ್ಕೆ ಪರಿಹಾರ ಏನು?: ಒಡಿಶಾ, ಮಧ್ಯಪ್ರದೇಶ, ಗುಜರಾತ್, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್ಗಢ, ಜಾರ್ಖಂಡ್, ಕರ್ನಾಟಕ (ಧಾರ್ವಿುಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ 2021) ಸೇರಿದಂತೆ 12ಕ್ಕೂ ಹೆಚ್ಚು ರಾಜ್ಯಗಳು ಬಲವಂತದ, ಮೋಸದ ಅಥವಾ ಆಮಿಷವೊಡ್ಡಿ ನಡೆಯುವ ಮತಾಂತರಗಳನ್ನು ತಡೆಯಲು ಕಾಯ್ದೆಗಳನ್ನು ಜಾರಿಗೆ ತಂದಿವೆ. ಈಗ ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸಮಗ್ರ ಮತಾಂತರ ತಡೆ ಮತ್ತು ಮರುಮತಾಂತರ ಕಾಯಿದೆ ರೂಪಿಸಬೇಕು. ಆಗ ಈ ವಿವಾದಗಳಿಗೆ, ಗೊಂದಲಗಳಿಗೆ ಶಾಶ್ವತ ಅಂತ್ಯ ಹೇಳಬಹುದು.