ಬಾಹ್ಯಾಕಾಶ ವಿಜ್ಞಾನಿಗಳನ್ನು ದಶಕಗಳಿಂದಲೂ ಕಾಡುತ್ತಿದ್ದ ಒಂದು ದೊಡ್ಡ ಗೊಂದಲಕ್ಕೆ ಹೊಸ ಆಯಾಮ ಸಿಕ್ಕಂತಾಗಿದೆ. ಆದಾಗ್ಯೂ, ಬ್ರಹ್ಮಾಂಡದಲ್ಲಿ ಮೊದಲು ಗೆಲಕ್ಸಿಗಳು (ನಕ್ಷತ್ರಪುಂಜಗಳು) ಸೃಷ್ಟಿಯಾಗಿ, ಆಮೇಲೆ ಅವುಗಳ ಒಳಗೆ ಕಪ್ಪು ಕುಳಿಗಳು ಬೆಳೆದವೇ? ಅಥವಾ ಮೊದಲೇ ದೈತ್ಯ ಕಪ್ಪು ಕುಳಿಗಳು ಹುಟ್ಟಿಕೊಂಡು, ತಮ್ಮ ಶಕ್ತಿಯಿಂದ ಸುತ್ತಲಿನ ಧೂಳು-ನಕ್ಷತ್ರಗಳನ್ನು ಸೆಳೆದು ಗೆಲಕ್ಸಿಗಳು ರೂಪುಗೊಳ್ಳಲು ಕಾರಣವಾದವೇ? ಎಂಬುದು ಗೊಂದಲವಾಗಿತ್ತು.