ಇಂದು ಬೆಳಿಗ್ಗೆ ಪ್ರಧಾನಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಮಸೂದೆ ವಿಫಲವಾದ ಕುರಿತು ತೀವ್ರ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ಮೋದಿ, ಪ್ರತಿಪಕ್ಷಗಳು ಮಹಿಳಾ ಮೀಸಲಾತಿಯನ್ನು ವಿರೋಧಿಸುವ ಮೂಲಕ ಬಹುದೊಡ್ಡ ತಪ್ಪು ಮಾಡಿದೆ. ದೇಶದ ಕೋಟ್ಯಂತರ ಮಹಿಳೆಯರು ಪ್ರತಿಪಕ್ಷಗಳ ಈ ನಡೆಯನ್ನು ಎಂದಿಗೂ ಕ್ಷಮಿಸುವುದಿಲ್ಲ. ಈ ಐತಿಹಾಸಿಕ ಅವಕಾಶವನ್ನು ಹಾಳುಮಾಡಿದವರಿಗೆ ದೇಶದ ಹೆಣ್ಣುಮಕ್ಕಳು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.