ನೆಹರು ದಾಖಲೆ ಸರಿಗಟ್ಟಿದ ನರೇಂದ್ರ ಮೋದಿ: ಸುದೀರ್ಘ 12 ವರ್ಷ ಪ್ರಧಾನಿಯಾಗಿ ದಾಖಲೆ; ಎನ್​ಡಿಎ ನಾಯಕರಿಂದ ಸನ್ಮಾನ | Narendra Modi

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Published on
ನವದೆಹಲಿ: ನರೇಂದ್ರ ಮೋದಿ(Narendra Modi) ಇಂದಿಗೆ (ಜೂ. 10) ನಿರಂತರ ಪ್ರಧಾನಿಯಾಗಿ 12 ವರ್ಷ ಪೂರೈಸಿದ್ದು, ಭಾರತದ ಮಾಜಿ ಪ್ರಧಾನಿ ಜವಾಹರ್ ಲಾಲ್ ಅವರ ದಾಖಲೆಯನ್ನು ಸರಿಗಟ್ಟಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ನೆಹರೂ 4,398 ದಿನಗಳ ಕಾಲ ಪ್ರಧಾನಿಯಾಗಿದ್ರೆ, ಮೋದಿಯರು ಇಂದಿಗೆ ಆ ದಾಖಲೆಯನ್ನ ಮುರಿದು 4,399 ದಿನಗಳನ್ನು ಪೂರೈಸಿದ್ದಾರೆ.
ಮೊದಲ ಬಾರಿಗೆ 2014 ಮೇ 26ರಂದು ಪ್ರಮಾಣವಚನ ಸ್ವೀಕರಿಸಿದ್ದ ನರೇಂದ್ರ ಮೋದಿಯವರು ಅಂದಿನಿಂದ ಇಂದಿನವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಧಾನಿ ಮೋದಿಗೆ ಸನ್ಮಾನ

ಎನ್‌ಡಿಎ ಸರ್ಕಾರ 12 ವರ್ಷಗಳನ್ನು ಪೂರೈಸುತ್ತಿದ್ದು, ಮತ್ತು ಪ್ರಧಾನಿ ಮೋದಿ ಅವರು ನೆಹರು ಅವರ ದೀರ್ಘಾವಧಿಯ ಅಧಿಕಾರಾವಧಿಯ ಸಾಧನೆಯನ್ನು ಮುರಿದಿರುವ ಈ ಸಮಯದಲ್ಲಿ ಇಂದು ಎನ್​ಡಿಎ ನಾಯಕರು ಒಟ್ಟುಗೂಡಿ ಸಂಭ್ರಮಾಚರಣೆ ನಡೆಸಲಿದ್ದಾರೆ ಎನ್ನಲಾಗಿದೆ.
ಎನ್​ಡಿಎ ಕೂಟದ ಸುಮಾರು 35 ಪಕ್ಷಗಳ ಸುಮಾರು 75 ಪ್ರತಿನಿಧಿಗಳು ಸಭೆ ಸೇರುವ ನಿರೀಕ್ಷೆಯಿದ್ದು, ಸರ್ಕಾರದ ಸಾಧನೆಗಳು ಮತ್ತು ಮೋದಿಯವರ ಸ್ವಂತ ಮೈಲಿಗಲ್ಲುಗಳ ಬಗ್ಗೆ ಸಭೆಯಲ್ಲಿ ಕೊಂಡಾಡುವ ಸಾಧ್ಯತೆಯಿದೆ. ಎನ್‌ಡಿಎ ಆಡಳಿತದ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸಮಾರಂಭದಲ್ಲಿ ಪ್ರಧಾನಿ ಮೋದಿಯವರು ಕೂಡ ಭಾಗವಹಿಸಲಿದ್ದು, ಅಲ್ಲಿ ನಾಯಕರು ಅವರಿಗೆ ಸನ್ಮಾನ ಮಾಡಲಿದ್ದಾರೆ.

ಪ್ರಧಾನಿ ಮೋದಿಗೆ ಅಭಿನಂಧನೆ

ಸುದೀರ್ಘ 12 ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಮೋದಿಯವರನ್ನು ಮಂಗಳವಾರ ಹಲವಾರು ದೇಶದ ಮುಖ್ಯಸ್ಥರು ಅಭಿನಂದಿಸಿದ್ದಾರೆ. ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಜನರು ಮೋದಿಯವರ ನಾಯಕತ್ವದಲ್ಲಿ ಪದೇ-ಪದೇ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಅಭಿನಂದಿಸಿದ್ದಾರೆ.
ಪಪುವಾ ನ್ಯೂಗಿನಿಯಾದ ಪ್ರಧಾನಿ ಜೇಮ್ಸ್ ಮರಾಪೆ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೋದ ಪ್ರಧಾನಿ ಕಮಲಾ ಪರ್ಸಾದ್-ಬಿಸ್ಸೆಸ್ಸರ್ ಅವರು ಮೋದಿ ಅವರನ್ನು ನಾಯಕತ್ವದ ಮಾದರಿ ಮತ್ತು ಉದಾಹರಣೆ ಎಂದು ಶ್ಲಾಘಿಸಿದ್ದಾರೆ. ಮತ್ತು ಭಾರತವು ಜಾಗತಿಕ ವಿಷಯಗಳಲ್ಲಿ ಪ್ರಮುಖ ಧ್ವನಿಯಾಗಿ ಹೊರಹೊಮ್ಮಿದೆ ಎಂದಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net