ಈ ವಿವಾದ ಸ್ಫೋಟಗೊಳ್ಳಲು ಪ್ರಮುಖ ಕಾರಣ ರಾಹುಲ್ ಗಾಂಧಿ ಹೇಳಿಕೆಗಳಾಗಿದ್ದು. ಕಳೆದ ವಾರ ಸಂಸತ್ತಿನಲ್ಲಿ ಪುಸ್ತಕದ ಪ್ರತಿಯೊಂದನ್ನು ತೋರಿಸಿದ್ದ ರಾಹುಲ್, ಸರ್ಕಾರಕ್ಕೆ ಮುಜುಗರ ತರುವಂತಹ ವಿಚಾರಗಳು ಈ ಪುಸ್ತಕದಲ್ಲಿವೆ, ಹಾಗಾಗಿ ಇದನ್ನು ತಡೆಯಲಾಗುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಫೆಬ್ರವರಿ 2 ರಿಂದಲೂ ಲೋಕಸಭೆಯಲ್ಲಿ ಈ ಪುಸ್ತಕದ ಆಂಶಗಳನ್ನು ಉಲ್ಲೇಖಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಪುಸ್ತಕ ಇನ್ನೂ ಅಧಿಕೃತವಾಗಿ ಪ್ರಕಟವಾಗದ ಕಾರಣ ಸ್ಪೀಕರ್ ಅದಕ್ಕೆ ಅನುಮತಿ ನೀಡಿಲ್ಲ.