ಹೀಗೆ ಸುಖ ಸಂಸಾರ ನಡೆಸುತ್ತಿದ್ದ ಕಮಾಂಡರ್, ಜೀವನೋಪಾಯಕ್ಕಾಗಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲೇ ಬೇಕಿತ್ತು. ಹೀಗಾಗಿ, ಮನೆಯಲ್ಲಿ ಸುಂದರ ಪತ್ನಿಯನ್ನು ಬಿಟ್ಟು ಕೆಲಸದ ನಿಮಿತ್ತ ತಿಂಗಳಾನುಗಟ್ಟಲೇ ಹೋಗೋದು ಅನಿವಾರ್ಯವಾಗಿರುತ್ತಿತ್ತು. ಹೀಗೆ ಪ್ರತಿನಿತ್ಯ ಒಂಟಿಯಾಗಿ ಕಾಲ ಕಳೆಯುವಾಗ ಸಿಲ್ವಿಯಾಗೆ ಸಿಕ್ಕಿದ್ದೇ ನಾನಾವತಿಯ ಆತ್ಮೀಯ ಗೆಳೆಯ, ಸಿಂಧಿ ಸಮುದಾಯದ ಮುಂಬೈನ ಉದ್ಯಮಿ ಪ್ರೇಮ್ ಅಹುಜಾ..