'ಕಳೆದ ಮೂರು ವಾರಗಳಿಂದ ನಿರಂತರವಾಗಿ ನಾನು ಟೀಕೆ, ನಿಂದನೆಗೆ ಒಳಗಾಗಿದ್ದೇನೆ. ನನ್ನನ್ನು ವೇಶ್ಯೆ ಎಂದು ಕರೆಯಲಾಗುತ್ತಿದೆ. ನನ್ನ ತಾಯಿಯನ್ನು ನಿಂದಿಸುತ್ತಿದ್ದಾರೆ. ಇದು ಯಾತಕ್ಕಾಗಿ, ನಾನು ಮಾಡಿದ ನಮಾಜ್ ಪ್ರಯೋಜನಗಳ ರೀಲ್ಗಾಗಿ. ನಾನು ಆರೋಗ್ಯದ ಬಗೆಗಿನ ವೃತ್ತಿಪರಳು. ನಾನು ಸಹ ಒಬ್ಬ ಹೆಮ್ಮೆಯ ಹಿಂದೂ. ನಾನು ಈ ಹಿಂದೆ ಹಿಂದೂ ಧರ್ಮದ ಧಾರ್ಮಿಕ ಆಚರಣೆ ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ಮಾತನಾಡಿ, ರೀಲ್ಸ್ ಹಂಚಿಕೊಳ್ಳುತ್ತಿದ್ದೆ. ಆಗ ನೀವು ಇದಕ್ಕೆ ಯಾವುದೇ ಪ್ರತಿಕ್ರಿಯೆ ಕೊಡುತ್ತಿರಲಿಲ್ಲ. ಯೋಗದಿನದಂದು ನಾನು ಪ್ರತಿ ಆಸನದ ಬಗ್ಗೆ ವಿವರಣೆ ಕೊಟ್ಟಿದೆ. ಅದರಲ್ಲು ಸೂರ್ಯ ನಮಸ್ಕಾರದಿಂದಾಗುವ ಪೂರ್ಣ ಲಾಭದ ಬಗ್ಗೆ ವಿವರಣೆ ಕೊಟ್ಟಿದ್ದೆ. ಈಗ ನಮಾಜ್ ಬಗ್ಗೆ ಹೇಳಿದ್ದಕ್ಕೆ ಯಾಕಿಷ್ಟು...ನಿಂದಿಸುತ್ತಿದ್ದೀರಿ' ಎಂದು ಟ್ರೋಲರ್ಸ್ಗಳಿಗೆ ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ.