ನೀಟ್ ಆಕಾಂಕ್ಷಿ ಅಬ್ದುಲ್ಲಾ ಮೊಹ್ಮದ್ ತಾಲಿಬ್ ಅವರ ತಂದೆ ಎಎನ್ಐಗೆ ಜೊತೆ ಮಾತನಾಡಿದರು. ನೀಟ್ ಆಕಾಂಕ್ಷಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಜೂನ್ 19 ರ ಶುಕ್ರವಾರ ಸಂಜೆ 4 ಗಂಟೆಗೆ ತನ್ನ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಂಡಾಗ, ಅದರಲ್ಲಿ ಪರೀಕ್ಷಾ ಕೇಂದ್ರದ ವಿಳಾಸ "ಸಲಾಮಾ ಬಿಂತ್ ಬುಟ್ಟಿ ಸ್ಟ್ರೀಟ್, 23 ನೇ ಮುರೂರ್ ರೋಡ್, ಅಬುಧಾಬಿ, ಯುಎಇ" ಎಂದು ನಮೂದಿಸಲಾಗಿತ್ತು. ಇದನ್ನು ಕಂಡು ನಾನು ಆತಂಕಕ್ಕೆ ಒಳಗಾದೆ. ಮಗನಿಗೆ ಪರೀಕ್ಷೆ ಬರೆಯಲು ಸಾಧ್ಯವಾಗೋದಿಲ್ಲ ಎಂದುಕೊಂಡೆ. ಪರೀಕ್ಷಾ ಕೇಂದ್ರದ ಆಯ್ಕೆ ನಾವು ನೀಡಿರಲಿಲ್ಲ ಎಂದರು.