ಮುಲಾಯಂ ಪುತ್ರ ಪ್ರತೀಕ್ ಯಾದವ್ ನಿಗೂಢ ಸಾವು: ವಿಷಪ್ರಾಶನ ಶಂಕೆ; ವೈದ್ಯರ ಶಾಕಿಂಗ್ ಹೇಳಿಕೆ! Prateek Yadav Died
ಮಾಜಿ ಸಿಎಂ ಮುಲಾಯಂ ಸಿಂಗ್ ಪುತ್ರ ಪ್ರತೀಕ್ ಯಾದವ್ ಸಾವು
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಾಜಿ ಸಿಎಂ ಮುಲಾಯಂ ಸಿಂಗ್ ಪುತ್ರ ಪ್ರತೀಕ್ ಯಾದವ್ ಸಾವು
ವಿಷಹಾಕಿ ಕೊಂದಿರುವುದಾಗಿ ಹಬ್ಬಿರುವ ವದಂತಿ
ಪ್ರತೀಕ್ ಯಾದವ್ ಸಾವು ವಿಷದಿಂದ ಸಂಭವಿಸಿಲ್ಲ ಎಂದ ಆಸ್ಪತ್ರೆ ವೈದ್ಯರು
ಲಖನೌ: ಸಮಾಜವಾದಿ ಪಕ್ಷ (SP) ದ ಸ್ಥಾಪಕ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿ. ಮುಲಾಯಂ ಸಿಂಗ್ ಯಾದವ್ ಪುತ್ರ ಪ್ರತೀಕ್ ಯಾದವ್ (Prateek Yadav Died) ಬುಧವಾರ (ಮೇ.13) ರಂದು ಸಾವನ್ನಪ್ಪಿದ್ದಾರೆ. 38 ವರ್ಷದ ಪ್ರತೀಕ್ ಯಾದವ್ ವಿಷವನ್ನು ಸೇವನೆ ಮಾಡಿ ಅಥವಾ ಯಾರೋ ವಿಷಹಾಕಿ ಸಾಯಿಸಿದ್ದಾರೆ ಎಂಬ ವದಂತಿ ಕೇಳಿವರುತ್ತಿತ್ತು. ಈದೀಗ ಈ ಎಲ್ಲಾ ಅನುಮಾನಗಳಿಗೆ ಆಸ್ಪತ್ರೆ ವೈದ್ಯರು ಸ್ಪಷ್ಟಿಕರಣ ನೀಡಿದ್ದಾರೆ.
ಮುಲಾಯಮ್ ಸಿಂಗ್ ಪುತ್ರ ಹಾಗೂ ಅಖಿಲೇಶ್ ಯಾದವ್ ಮಲ ಸಹೋದರ ಪ್ರತೀಕ್ ಯಾದವ್ ಸಾವಿಗೆ ಕುರಿತಂತೆ ಮಾತನಾಡಿರುವ ಲಖನೌ ಸಿವಿಲ್ ಆಸ್ಪತ್ರೆ ವೈದ್ಯರಾದ ಡಾ. ಜಿ.ಸಿ. ಗುಪ್ತಾ, ಪ್ರತೀಕ್ ಯಾದವ್ ಅವರು ನಮ್ಮ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದನ್ನು ವೈದ್ಯರು ಹಾಗೂ ಪೊಲೀಸ್ ಸಿಬ್ಬಂದಿ ಇಬ್ಬರು ದೃಢಪಡಿಸಿದ್ದಾರೆ.
ಆದರೆ ಪ್ರತೀಕ್ ಯಾದವ್ ದೇಹದಲ್ಲಿ ಯಾವುದೇ ರೀತಿಯ ವಿಷ ದೊರೆತಿಲ್ಲ, ಹೀಗಾಗಿ ಅವರ ಸಾವು ವಿಷದ ಸ್ವಯಂ ಸೇವನೆ ಅಥವಾ ಇತತರಿಂದ ವಿಷಪ್ರಾಶನ ನಡೆದಿಲ್ಲ ಎಂದು ಗುಪ್ತಾ ತಿಳಿಸಿದ್ದಾರೆ.
ಪ್ರತೀಕ್ ಅವರ ಸಾವಿಗೆ ನಿಖರ ಕಾರಣ ಏನೆಂದು ಮರಣೋತ್ತರ ಪರೀಕ್ಷೆಯ ತರುವಾಯ ತಿಳಿದು ಬರಬೇಕಿದೆ, ಆದರೆ ಪ್ರಾಥಮಿಕ ತನಿಖೆಯಲ್ಲಿ ವಿಷದಿಂದ ಸಾವು ಸಂಭವಿಸಿದೆ ಎನ್ನುವುದು ಸುಳ್ಳಾಗಿದ್ದು, ಯಾರು ಈ ಕುರಿತು ವದಂತಿಗಳನ್ನು ಹಬ್ಬಿಸಬೇಡಿ ಎಂದು ಅವರು ವಿನಂತಿಸಿ ಕೊಂಡಿದ್ದಾರೆ.
ಏಪ್ರಿಲ್ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಪ್ರತೀಕ್!
ಮಾಹಿತಿ ಪ್ರಕಾರ, ಆರೋಗ್ಯದಲ್ಲಿ ತೀವ್ರ ವ್ಯತ್ಯಯವಾದ ಹಿನ್ನಲೆ ಪ್ರತೀಕ್ ಯಾದವ್, ಏಪ್ರಿಲ್ 30 ರಂದು ಲಖನೌನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದರು ಎಂದು ತಿಳಿದು ಬಂದಿದೆ.
ಆದರೆ ಅಲ್ಲಿಯ ವೈದ್ಯರಿಗೆ ಮಾಹಿತಿ ನೀಡದೆ ಪ್ರತೀಕ್ ಮನೆಗೆ ಹಿಂದಿರುಗಿದ್ದರು. ಪ್ರತೀಕ್ ಶ್ವಸಕೋಶ ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರೆಂದು ಹೇಳಲಾಗುತ್ತಿದೆ.
ರಾಜಕೀಯದಲ್ಲಿ ದೂರವಿದ್ದ ಪ್ರತೀಕ್ ಯಾದವ್!
ಪ್ರತೀಕ್ ಯಾದವ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಹಾಗೂ ಸಾಧನಾ ಗುಪ್ತಾ (ಎರಡನೇ ಪತ್ನಿ) ಅವರ ಮಗನಾಗಿದ್ದರು. ಇವರ ತಂದೆ ಹಾಗೂ ಮಲಸಹೋದರ ಅಖಿಲೇಶ್ ಯಾದವ್ ರಾಜಕೀಯದಲ್ಲಿ ಸಕ್ರೀಯರಾಗಿದ್ದರೂ ಸಹ ಪ್ರತೀಕ್ ರಾಜಕಾರಣದಿಂದ ಅಂತರವನ್ನು ಕಾಯ್ದುಕೊಂಡಿದ್ದರು.
ಲಂಡನ್ನಿನ ಪ್ರತಿಷ್ಟಿತ ಕಾಲೇಜಿನಿಂದ ಎಂಬಿಎ ಪಧವಿ ಪಡೆದಿದ್ದ ಪ್ರತೀಕ್, ಲಖನೌನಲ್ಲಿ ಫಿಟ್ನೆಸ್ಗೆ ಸಂಬಂಧಿಸಿದ ವ್ಯಾಪಾರ-ವ್ಯವಹಾರದಲ್ಲಿ ತೊಡಗಿಕೊಂಡಿದ್ದರು.
2011 ರಲ್ಲಿ ಅಪರ್ಣಾ ಯಾದವ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಪ್ರತೀಕ್ ಯಾದವ್ ಕೆಲ ಸಮಯದ ನಂತರ ಅಪರ್ಣಾಗೆ ವಿಚ್ಛೇದನ ನೀಡುವುದಾಗಿ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದರು. ನಂತರ ಮನೆಯವರ ಮಧ್ಯಸ್ಥಿಕೆ ನಂತರ ಇವರಿಬ್ಬರು ಜೊತೆಯಲ್ಲಿದ್ದರು.
ಪ್ರತೀಕ್ ಪತ್ನಿ ಅಪರ್ಣಾ ರಾಜಕಾರಣದಲ್ಲಿ ಸಕ್ರೀಯರಾಗಿದ್ದು, 2017 ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಲಖನೌ ಕ್ಯಾಂಟ್‌ನಿಂದ ಸ್ಪರ್ಧಿಸಿ ಸೋತಿದ್ದರು. ನಂತರ 2022 ರಲ್ಲಿ ಬಿಜೆಪಿ ಸೇರಿದ ಅಪರ್ಣಾ ಪ್ರಸ್ತುತ ಪ್ರದೇಶ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷರಾಗಿದ್ದಾರೆ, (ಏಜನ್ಸೀಸ್).