ನನ್ನ ಸಂಗಾತಿ ಭಾರತೀಯ ಮೂಲದವಳು; ಮಗನ ಮಧ್ಯದ ಹೆಸರು ಶೇಖರ್; ಎಲಾನ್ ಮಸ್ಕ್​​ | Elon Musk

ಎಲಾನ್ ಮಸ್ಕ್ ಮತ್ತು ಅವರ ಸಂಗಾತಿ ಸಿವೊನ್ ಜಿಲಿಸ್
ಎಲಾನ್ ಮಸ್ಕ್ ಮತ್ತು ಅವರ ಸಂಗಾತಿ ಸಿವೊನ್ ಜಿಲಿಸ್
Published on
Elon Musk: ಕರ್ನಾಟಕ ಮೂಲದ ಜರೋಢಾ ಸಂಸ್ಥಾಪಕ ನಿಖಿಲ್ ಕಾಮತ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ವಿಶ್ವದ ನಂ. 01 ಶ್ರೀಮಂತ ಟೆಸ್ಲಾ ಮತ್ತು ಸ್ಪೇಸ್​ ಎಕ್ಸ್​​ ಸಿಇಒ ಎಲಾನ್ ಮಸ್ಕ್​ ಮಾತನಾಡಿದ್ದು ತಮ್ಮ ವೈಯಕ್ತಿಕ ಜೀವನದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.  
ಎಲಾನ್ ಮಸ್ಕ್ ಪ್ರಸ್ತುತ ನ್ಯೂರಾಲಿಂಕ್ ಸಿಇಒ ಸಿವೊನ್ ಜಿಲಿಸ್ ಅವರೊಂದಿಗೆ ಸಂಬಂಧದಲ್ಲಿದ್ದಾರೆ. ದಂಪತಿಗೆ ಮಕ್ಕಳೂ ಇದ್ದಾರೆ. ಆದಾಗ್ಯೂ, ಮಸ್ಕ್ ನಿಖಿಲ್ ಕಾಮತ್ ಅವರಿಗೆ ಸಿವೊನ್ ಜಿಲಿಸ್ ಭಾರತೀಯ ಮೂಲದವರು ಎಂದು ಹೇಳಿದ್ದಾರೆ. 
ನಿಮಗೆ ಇದು ತಿಳಿದಿರಬಹುದು ಅಥವಾ ತಿಳಿದಿಲ್ಲದಿರಬಹುದು, ಆದರೆ ನನ್ನ ಸಂಗಾತಿ ಜಿಲಿಸ್ ಭಾರತೀಯ ಮೂಲದವರು. ನಮ್ಮ ಮಗನ ಮಧ್ಯದ ಹೆಸರು ಶೇಖರ್ ಎಂದು ಹೇಳಿದ್ದಾರೆ. ಇದು ಭಾರತೀಯ-ಅಮೇರಿಕನ್ ಭೌತಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಹೆಸರಿನ ಶೇಖರ್ ಹೆಸರನ್ನು ಮಗನ ಹೆಸರಿನ ಮಧ್ಯದಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.
ಸಿವೊನ್ ಜಿಲಿಸ್ ತನ್ನ ಬಾಲ್ಯವನ್ನು ಕೆನಡಾದಲ್ಲಿ ಕಳೆದಿದ್ದಾರೆ. ಆಕೆಯ ತಂದೆ ಅಂತರರಾಷ್ಟ್ರೀಯ ವಿನಿಮಯ ವಿದ್ಯಾರ್ಥಿಯಾಗಿದ್ದರು. ಆಕೆಯನ್ನು ಬಾಲ್ಯದಲ್ಲಿ ದತ್ತು ಪಡೆಯಲಾಯಿತು. ಆದರೆ, ಆಕೆಯ ಹಿನ್ನೆಲೆಯ ಸಂಪೂರ್ಣ ವಿವರಗಳು ತನಗೆ ತಿಳಿದಿಲ್ಲ ಮಸ್ಕ್ ಹೇಳಿದ್ದಾರೆ. 
ಜಿಲಿಸ್ 2017ರಲ್ಲಿ ಮಸ್ಕ್ ಅವರ AI ಕಂಪನಿಯಾದ ನ್ಯೂರಾಲಿಂಕ್ ಅನ್ನು ಸೇರಿದರು. ಮತ್ತು ಪ್ರಸ್ತುತ ಕಾರ್ಯಾಚರಣೆ ಮತ್ತು ವಿಶೇಷ ಯೋಜನೆಗಳ ನಿರ್ದೇಶಕಿಯಾಗಿದ್ದಾರೆ. ಅವರು ಯೇಲ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ. ಜಿಲಿಸ್ ಅವರಿಗೆ ಮಸ್ಕ್ ನಿಂದ ನಾಲ್ಕು ಮಕ್ಕಳಿದ್ದಾರೆ, ಅವಳಿ ಮಕ್ಕಳು, ಸ್ಟ್ರೈಡರ್ ಮತ್ತು ಅಜುರೆ, ಮಗಳು ಅರ್ಕಾಡಿಯಾ ಮತ್ತು ಮಗ ಸೆಲ್ಡನ್ ಲೈಕರ್ಗಸ್ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net