ರಾಜೇಂದರ್, ಕಳೆದ ನಾಲ್ಕು ವರ್ಷಗಳಿಂದ ಮದುವೆಯಾಗುವಂತೆ ಅನಿತಾಳನ್ನು ಬೆಂಬಿಡದೆ ಕಾಡುತ್ತಿದ್ದ. ಅಲ್ಲದೆ, ಕೆಲವು ಸಮಯದಿಂದ ಕರ್ತವ್ಯದಲ್ಲಿರುವಾಗಲೇ ವಿಡಿಯೋ ಕರೆ ಮಾಡುವಂತೆ ಮತ್ತು ಬೇರೆಯವರೊಂದಿಗೆ ಮಾತನಾಡದಂತೆ ಕಿರುಕುಳ ನೀಡುತ್ತಿದ್ದ. ರಾಜೇಂದರ್ ವರ್ತನೆ ಇಷ್ಟವಾಗದಿದ್ದಾಗ ಅನಿತಾ ತನ್ನ ಪಾಲಕರಿಗೆ ಈ ವಿಚಾರವನ್ನು ತಿಳಿಸಿದಳು. ನಿನ್ನನ್ನು ಮದುವೆಯಾಗಲು ನನಗೆ ಇಷ್ಟವಿಲ್ಲ ಎಂದು ರಾಜೇಂದರ್‌ಗೂ ಹೇಳಿದಳು. ಆದಾಗ್ಯೂ, ತನ್ನನ್ನು ಮದುವೆಯಾಗಬೇಕೆಂದು ರಾಜೇಂದರ್, ಅನಿತಾಳನ್ನು ಒತ್ತಾಯಿಸುತ್ತಲೇ ಇದ್ದನು.