ಪ್ರಾಥಮಿಕ ತನಿಖೆಯ ಪ್ರಕಾರ, ರಜೆ ಪಡೆಯುವ ವಿಚಾರದಲ್ಲಿ ಮ್ಯಾನೇಜರ್ ಮತ್ತು ಗಾರ್ಡ್ ನಡುವೆ ಕಳೆದ ಕೆಲವು ದಿನಗಳಿಂದ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ರವೀಂದ್ರ ಹೂಡಾ ರಜೆ ಕೇಳುತ್ತಿದ್ದರೂ ಮ್ಯಾನೇಜರ್ ನಿರಾಕರಿಸುತ್ತಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಗಾರ್ಡ್, ಈ ಘೋರ ಅಪರಾಧ ಎಸಗಿದ್ದಾನೆ ಎಂದು ಎಸಿಪಿ ಜ್ಞಾನ ಪ್ರಕಾಶ್ ರೈ ತಿಳಿಸಿದ್ದಾರೆ.ಬಾಗ್‌ಪತ್ ನಿವಾಸಿಯಾಗಿರುವ ಆರೋಪಿ ರವೀಂದ್ರನನ್ನು ಬಂಧಿಸಲು ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದು, ಶೀಘ್ರದಲ್ಲೇ ಆತನನ್ನು ಪತ್ತೆಹಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).