`ಮೊದಲಿಗೆ ಆಟೋ ಹತ್ತಿದ ಟೆಕ್ಕಿ, ಚಾಲಕನ ಬಳಿ ಮಾತನಾಡಿಸುತ್ತ ಹೋಗುತ್ತಾರೆ. ನೀವು ದಿನಕ್ಕೆ ಮುಂಬೈನಲ್ಲಿ ಆಟೋ ಓಡಿಸೋದ್ರಿಂದ ಎಷ್ಟು ಹಣ ಗಳಿಸುತ್ತೀರಿ ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಚಾಲಕ ನನ್ನ ಆಟೋ ಖರ್ಚು, ನನ್ನ ಖರ್ಚು ಎಲ್ಲ ಕಳೆದು, 2,500 ರೂಪಾಯಿ ಗಳಿಸುತ್ತೇನೆ. ಆದರೆ, ಕೆಲವೊಮ್ಮೆ ಏರುಪೇರಾಗುತ್ತದೆ' ಎಂದು ಹೇಳುತ್ತಾನೆ.