ಮನೆ ಒಳಗಡೆ ಬಂದ ಡೆಲಿವರಿ ಬಾಯ್‌ಗೆ ಗಣೇಶ್ ಶರ್ಮಾ, ಒಂದು ಆಕರ್ಷಕ ಆಫರ್ ಹಾಗೂ ಸವಾಲನ್ನು ಮುಂದಿಟ್ಟರು. ಮನೆಯ ಗೋಡೆಗೆ ಸಿಕ್ಕಿಸಿದ್ದ 'ಡಾರ್ಟ್ಸ್' (Darts - ಬಾಣ ಎಸೆಯುವ ಆಟ) ಬೋರ್ಡ್ ಅನ್ನು ತೋರಿಸಿ, ನೀವು ಈ ಆಟದಲ್ಲಿ ಸರಿಯಾದ ಗುರಿಗೆ ಬಾಣವನ್ನು ಎಸೆದರೆ, ನಿಮಗೆ 1,000 ರೂಪಾಯಿ ನಗದು ಟಿಪ್ಸ್ ಸಿಗುತ್ತದೆ ಎಂದು ಸವಾಲು ಹಾಕಿದರು. ಮೊದಲಿಗೆ ಡೆಲಿವರಿ ರೈಡರ್ ಸ್ವಲ್ಪ ಮುಜುಗರ ಹಾಗೂ ಆಶ್ಚರ್ಯ ಪಟ್ಟರೂ, ನಂತರ ನಗುತ್ತಲೇ ಆಟವಾಡಲು ಒಪ್ಪಿಕೊಂಡರು