12 ಗಂಟೆ ವಿಳಂಬ: ಮುಂಬೈ ಏರ್‌ಪೋರ್ಟ್‌ನಲ್ಲಿ ಸ್ಪೈಸ್‌ಜೆಟ್ ಪ್ರಯಾಣಿಕರ ಹೈಡ್ರಾಮಾ! Mumbai Airport

ವಿಮಾನ ನಿಲ್ದಾಣಕ್ಕೆ ಬಂದರೆ ನಿಗದಿತ ಸಮಯಕ್ಕೆ ವಿಮಾನ ಹತ್ತಿ ಪ್ರಯಾಣ ಆರಂಭಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ನೂರಾರು ಪ್ರಯಾಣಿಕರಿಗೆ ಗಂಟೆಗಟ್ಟಲೆ ಕಾದು ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ಜೆಟ್ ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.MumbaiAirport
ಮುಂಬೈ ಏರ್‌ಪೋರ್ಟ್‌ನಲ್ಲಿ ಸ್ಪೈಸ್‌ಜೆಟ್ ಪ್ರಯಾಣಿಕರ ಆಕ್ರೋಶ
ಮುಂಬೈ ಏರ್‌ಪೋರ್ಟ್‌ನಲ್ಲಿ ಸ್ಪೈಸ್‌ಜೆಟ್ ಪ್ರಯಾಣಿಕರ ಆಕ್ರೋಶWEB
Published on: 

ಮುಂಬೈ : ವಿಮಾನ ನಿಲ್ದಾಣಕ್ಕೆ ಬಂದರೆ ನಿಗದಿತ ಸಮಯಕ್ಕೆ ವಿಮಾನ ಹತ್ತಿ ಪ್ರಯಾಣ ಆರಂಭಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ನೂರಾರು ಪ್ರಯಾಣಿಕರಿಗೆ ಗಂಟೆಗಟ್ಟಲೆ ಕಾದು ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ಜೆಟ್ ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 12 ಗಂಟೆಗೂ ಹೆಚ್ಚು ಸಮಯ ಯಾವುದೇ ವಿಮಾನ ಟೇಕಾಫ್ ಆಗಿಲ್ಲ ಎನ್ನಲಾಗಿದ್ದು, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಗದ್ದಲ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ವಿಮಾನ ಹಾರಾಟ ಯಾವಾಗ? ಪ್ರಯಾಣಿಕರಿಗೆ ಮಾಹಿತಿ ಇಲ್ಲ

ವರದಿಗಳ ಪ್ರಕಾರ, ಮಂಗಳವಾರ ಸಂಜೆ 7 ಗಂಟೆಯಿಂದ ಮುಂಬೈ ವಿಮಾನ ನಿಲ್ದಾಣದಿಂದ ಸ್ಪೈಸ್‌ಜೆಟ್‌ನ ಯಾವುದೇ ವಿಮಾನ ಹಾರಾಟ ನಡೆಸಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ತಡರಾತ್ರಿಯ ವಿಮಾನಗಳೂ ವ್ಯತ್ಯಯಗೊಂಡಿದ್ದು, ರಾತ್ರಿ 11.30ಕ್ಕೆ ನಿಗದಿಯಾಗಿದ್ದ ವಿಮಾನದ ಬೋರ್ಡಿಂಗ್ ಕೂಡ ಆರಂಭವಾಗಿರಲಿಲ್ಲ ಎನ್ನಲಾಗಿದೆ. ವಿಮಾನ ವಿಳಂಬವಾಗಿದೆಯೇ, ರದ್ದಾಗಿದೆಯೇ ಅಥವಾ ಯಾವ ಸಮಯಕ್ಕೆ ಹೊರಡಲಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಗದೆ ಪ್ರಯಾಣಿಕರು ಪರದಾಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ಜೆಟ್ ಕೌಂಟರ್‌ಗಳ ಮುಂದೆ ಜಮಾಯಿಸಿದ ಪ್ರಯಾಣಿಕರು ಸಿಬ್ಬಂದಿಗೆ ಪ್ರಶ್ನೆಗಳನ್ನು ಕೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ವಿಮಾನಯಾನ ಸಂಸ್ಥೆಯಿಂದ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿಯೂ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ವಿಮಾನ ನಿಗದಿಯಾಗಿದ್ದ ಪ್ರಯಾಣಿಕರೊಬ್ಬರು ವಸಾಯಿಯಿಂದ ಕುಟುಂಬಸ್ಥರು ಹಾಗೂ ಅತಿಥಿಗಳೊಂದಿಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದರೂ, ಯಾವುದೇ ಸ್ಪಷ್ಟ ಮಾಹಿತಿ ಸಿಗದೆ ಕಾಯಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ವಿಮಾನ ವಿಳಂಬ ಅಥವಾ ರದ್ದತಿ ಬಗ್ಗೆ ಮಾಹಿತಿ ನೀಡುವವರೇ ಇಲ್ಲ, ಬೋರ್ಡಿಂಗ್ ಪಾಸ್ ಕೂಡ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಮತ್ತೆ ಕಾರ್ಯಾಚರಣೆಯ ಸಮಸ್ಯೆಗಳಲ್ಲಿ ಸ್ಪೈಸ್‌ಜೆಟ್

ಇತ್ತೀಚಿನ ದಿನಗಳಲ್ಲಿ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆ ಹಲವು ಕಾರ್ಯಾಚರಣೆಯ ಸಮಸ್ಯೆಗಳನ್ನು ಎದುರಿಸುತ್ತಿದೆ ಎನ್ನಲಾಗಿದೆ. ಕಳೆದ ಭಾನುವಾರ ದುಬೈನಿಂದ ಹೊರಡಬೇಕಿದ್ದ ನಾಲ್ಕು ವಿಮಾನಗಳನ್ನು ರದ್ದುಗೊಳಿಸಲಾಗಿತ್ತು. ವಿಮಾನಗಳಿಗೆ ನೆಲದ ನಿರ್ವಹಣಾ ಸೇವೆ ಒದಗಿಸುವ ಡಿನಾಟಾ. ಬಾಕಿ ಹಣ ಪಾವತಿಸದ ಕಾರಣ ಚೆಕ್-ಇನ್ ಸೇವೆ ಸ್ಥಗಿತಗೊಳಿಸಿತ್ತು ಎಂದು ವರದಿಯಾಗಿದೆ. ಸ್ಪೈಸ್‌ಜೆಟ್ ಸಂಸ್ಥೆಯು 1.4 ಕೋಟಿಗೂ ಹೆಚ್ಚು ಅಲ್ಲ, 14 ಮಿಲಿಯನ್ UAE ದಿರ್ಹಮ್‌ಗೂ ಅಧಿಕ ಮೊತ್ತವನ್ನು ಬಾಕಿ ಉಳಿಸಿಕೊಂಡಿತ್ತು ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ : ಅಪರಿಚಿತರ ನಡುವೆ ಬ್ರೆಜಿಲ್ ಬೆಡಗಿಯ ಸಂಭ್ರಮ; ವಿದೇಶಿ ಯುವತಿಯ ವೈರಲ್ ಪಯಣ! Brazil Woman

ಈ ಸಮಸ್ಯೆ ನವೆಂಬರ್ 12ರ ಅವಧಿಗೆ ಸೀಮಿತವಾಗಿತ್ತು ಎನ್ನಲಾಗಿದ್ದರೂ, ಬಳಿಕವೂ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯಗಳ ಆತಂಕ ಮುಂದುವರಿದಿದೆ. ದೆಹಲಿ ಹಾಗೂ ಮುಂಬೈ ವಿಮಾನ ನಿಲ್ದಾಣಗಳು ಕೂಡ ಪ್ರಯಾಣಿಕರಿಗೆ ಸ್ಪೈಸ್‌ಜೆಟ್ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯ ಕುರಿತು ಮುನ್ನೆಚ್ಚರಿಕೆ ನೀಡಿದ್ದವು. ಮುಂಬೈ ವಿಮಾನ ನಿಲ್ದಾಣದ ಇತ್ತೀಚಿನ ಗೊಂದಲದ ಕುರಿತು ಸ್ಪೈಸ್‌ಜೆಟ್ ಸಂಸ್ಥೆ ಅಧಿಕೃತ ಹೇಳಿಕೆ ನೀಡಿಲ್ಲ ಎನ್ನಲಾಗಿದೆ. ವಿಮಾನಗಳ ಹಾರಾಟದ ಸಮಯದ ಬಗ್ಗೆ ಸ್ಪಷ್ಟನೆ ಸಿಗದೆ ಪ್ರಯಾಣಿಕರ ಪರದಾಟ ಮುಂದುವರಿದಿದೆ.