ಪರ ಪುರುಷನ ಜೊತೆ ತಾಯಿಯ ಅಕ್ರಮ ಸಂಬಂಧ: ಇಬ್ಬರನ್ನು ಕೊಂದು ಶವಗಳನ್ನು ಪೊಲೀಸ್ ಠಾಣೆಗೆ ಕೊಂಡೊಯ್ದ ಮಗ!
Crime
Published on:
Copied
Follow Us
ಹರಿಯಾಣ: ತನ್ನ ತಾಯಿ ಬೇರೆಯೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದನ್ನು ಕಂಡ ಮಗ, ತಾಯಿ ಮತ್ತು ಆಕೆಯ ಜೊತೆಗಿದ್ದ ವ್ಯಕ್ತಿ ಸೇರಿ ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿ ಶವಗಳನ್ನು ಪೊಲೀಸ್ ಠಾಣೆಗೆ ಕೊಂಡೊಯ್ದ ಘಟನೆ ಹರಿಯಾಣದ ಸಿರ್ಸಾದಲ್ಲಿ ಶುಕ್ರವಾರ ನಡೆದಿದೆ.
ಪೊಲೀಸ್ ಠಾಣೆ ಮುಂದೆ ಶವಗಳನ್ನು ನೋಡಿದ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು, ಶವಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮೃತ ಮಹಿಳೆಯನ್ನು 42 ವರ್ಷದ ಅಂಗೂರಿ ದೇವಿ ಮತ್ತು ಆಕೆಯ ಪ್ರಿಯಕರ 45 ವರ್ಷದ ಲೇಖರಾಜ್ ಎಂದು ಗುರುತಿಸಲಾಗಿದೆ.
ರೆಂಡ್ಹ್ಯಾಂಡ್ ಆಗಿ ಹಿಡಿದು ಕೊಂದ!
ರಾಜಕುಮಾರ್ ಎಂಬ ಯುವಕ ಗುರುವಾರ ರಾತ್ರಿ ತನ್ನ ತಾಯಿ ನೆರೆಹೊರೆಯ ವ್ಯಕ್ತಿಯಾದ ಲೇಖರಾಜ್ ಜೊತೆ ಇರುವುದನ್ನು ಕಂಡಿದ್ದಾನೆ. ಇಬ್ಬರನ್ನು ರೆಂಡ್ಹ್ಯಾಂಡ್ ಆಗಿ ಹಿಡಿದಿದ್ದಾನೆ. ಕೋಪದಲ್ಲಿ ಇಬ್ಬರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶವಗಳನ್ನು ರಾತ್ರಿ ಕಾರಿನಲ್ಲಿ ಹಾಕಿದ್ದಾನೆ. ಬಳಿಕ ಕಾರನ್ನು ಪೊಲೀಸ್ ಠಾಣೆಗೆ ತಂದು ಪೋಲಿಸರ ಎದರೇ ಶವಗಳನ್ನು ಹೊರ ತೆಗೆದಿದ್ದಾನೆ.
ಇನ್ನು ಆರೋಪಿ ರಾಜುಕುಮಾರ್, ನನ್ನ ತಾಯಿ ನೆರೆಮನೆಯವರೊಂದಿದೆ ಸಂಬಂಧ ಇತ್ತು. ಇದನ್ನು ಹಲವು ಬಾರಿ ನನ್ನ ತಾಯಿಗೆ ಎಚ್ಚರಿಸಿದ್ದೆ. ಅದರೆ, ಅವರು ನನ್ನ ಮಾತು ಕೇಳಲ್ಲೇ ಇಲ್ಲ. ಹೀಗಾಗಿ ಕೊಂದಿರುವೆ ಎಂದು ಹೇಳಿಕೆ ನೀಡಿದ್ದಾನೆ. ಈ ಘಟನೆ ಹರಿಯಾಣದ್ಯಾಂತ ಅಂತಕ ಸೃಷ್ಠಿಸಿದೆ(ಏಜೆನ್ಸೀಸ್).