ಚಲಿಸುವ ರೈಲಿಗೆ ಮೈಯೊಡ್ಡಿ ಮಕ್ಕಳನ್ನು ರಕ್ಷಿಸಿದ ತಾಯಿ: ಎದೆ ಝಲ್ಲೆನಿಸುವ ವಿಡಿಯೋ ವೈರಲ್! Train Viral Video
Train Viral Video (ಚಿತ್ರ X)
Published on:
Copied
Follow Us
Train Viral Video: ರೈಲ್ವೇ ಪ್ಲಾಟ್‌ಫಾರ್ಮ್ ಮತ್ತು ವೇಗವಾಗಿ ಚಲಿಸುವ ರೈಲಿನ ನಡುವಿನ ಅತ್ಯಂತ ಕಿರಿದಾದ ಜಾಗದಲ್ಲಿ ಸಿಲುಕಿಕೊಂಡ ತನ್ನ ಮಕ್ಕಳ ಜೀವ ಉಳಿಸಲು ತಾಯಿಯೊಬ್ಬಳು ತನ್ನ ದೇಹವನ್ನೇ ಕವಚವನ್ನಾಗಿ ಮಾಡಿ ರಕ್ಷಿಸಿರುವ ಭೀಕರ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏನಿದು ಘಟನೆ?
ವೈರಲ್ ಆಗಿರುವ ವೀಡಿಯೊದಲ್ಲಿ, ಪ್ಲಾಟ್‌ಫಾರ್ಮ್ ಮತ್ತು ಹಳಿಗಳ ನಡುವಿನ ಕಿರಿದಾದ ಜಾಗದ ನಡುವೆ ತಾಯಿಯೊಬ್ಬರು ತಮ್ಮ ಇಬ್ಬರು ಮಕ್ಕಳನ್ನು ಅಂಟಿಕೊಂಡು ಕೂತಿರುವುದನ್ನು ನೋಡಬಹುದು. ಆ ಸಮಯದಲ್ಲಿ ಭಾರಿ ವೇಗದಲ್ಲಿ ಆಗಮಿಸಿದ ರೈಲು ಅವರ ತೀರಾ ಹತ್ತಿರದಲ್ಲೇ ಹಾದು ಹೋಗುತ್ತಿದೆ. ಈ ಅಪಾಯಕಾರಿ ಸಂದರ್ಭದಲ್ಲಿ ತಾಯಿ ಮಕ್ಕಳಿಗೆ ಏನೂ ಆಗಬಾರದೆಂದು ಯೋಚಿಸಿ ತನ್ನ ದೇಹದಿಂದ ಅವರನ್ನು ಮುಚ್ಚಿ ರಕ್ಷಣೆ ನೀಡಿದ್ದಾರೆ. ರೈಲು ಚಲಿಸುವಾಗ ಆಕೆಗೆ ಅದರಿಂದ ಪೆಟ್ಟಾಗಿದ್ದರೂ ಅವರು ಧೈರ್ಯಗೆಡದೇ ಮಕ್ಕಳನ್ನು ಹಿಡಿದುಕೊಂಡೇ ನಿಂತಿದ್ದರು.
ಆದಾಗ್ಯೂ, ಪ್ಲಾಟ್‌ಫಾರ್ಮ್‌ನಲ್ಲಿದ್ದ ಜನರು ಈ ದೃಶ್ಯವನ್ನು ಕಂಡು ಭಯದಿಂದ ಕಿರುಚಾಡುತ್ತಿರುವುದು ವೀಡಿಯೊದಲ್ಲಿ ಕೇಳಿಸುತ್ತದೆ. ರೈಲು ಸಂಪೂರ್ಣವಾಗಿ ಹಾದು ಹೋದ ನಂತರ ತಾಯಿ ಮತ್ತು ಮಕ್ಕಳು ಸುರಕ್ಷಿತವಾಗಿ ಎದ್ದು ನಿಂತರು ಅವರನ್ನು ಸ್ಥಳೀಯರು ಅಲ್ಲಿಂದ ಹೊರ ಕರೆದುಕೊಂಡು ಬಂದಿರುವುದನ್ನು ಅಲ್ಲಿನ ವಿಡಿಯೋಗಳು ತೋರಿಸುತ್ತಿವೆ.
ತಾಯಿಯ ಸಾಹಸಕ್ಕೆ ಪ್ರಶಂಸೆ ಹಾಗೂ ಟೀಕೆ
ಈ ವಿಡಿಯೋವನ್ನು'ಭಾರತ್ ಮಾತಾ ಕೆ ಸೇವಕ್' ಎಂಬ ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ತಾಯಿಯನ್ನು ತನ್ನ ಮಕ್ಕಳ ಜೀವ ರಕ್ಷಿಸಿದ "ಮಾನವ ಕವಚ" (Human Shield) ಎಂದು ಬಣ್ಣಿಸಿದ್ದಾರೆ. ಈ ದೃಶ್ಯವನ್ನು ವೀಕ್ಷಿಸಿದ ನೆಟ್ಟಿಗರು ತಾಯಿಯ ಸಮಯಪ್ರಜ್ಞೆ ಮತ್ತು ಮಮತೆಗೆ ಶ್ಲಾಘನೆ ವ್ಯಕ್ತಪಡಿಸಿದ್ದು, "ಆಕೆ ನಿಜವಾದ ಹೀರೊ" ಎಂದು ಕಾಮೆಂಟ್ ಮಾಡಿದ್ದಾರೆ.
ಆದಾಗ್ಯೂ, ಈ ವೀಡಿಯೊ ಕೆಲವರ ಟೀಕೆಗೂ ಗುರಿಯಾಗಿದ್ದು, ಸುರಕ್ಷಿತವಾದ ಮೇಲ್ಸುತುವೆ ಕಾಲುದಾರಿ ಬಳಸದೇ ಅಪಾಯಕಾರಿ ಹಳಿಗಳ ನಡುವೆ ಹೇಗೆ ಹೋದರು ಎಂದು ಕೆಲ ಬಳಕೆದಾರರು ಪ್ರಶ್ನಿಸಿದ್ದಾರೆ. ತಾಯಿಯ ಸಾಹಸ ಮೆಚ್ಚುವಂತಹದ್ದಾದರೂ, ಇಂತಹ ಜಾಗಕ್ಕೆ ಹೋಗಿ ಮಕ್ಕಳ ಜೀವವನ್ನು ಅಪಾಯಕ್ಕೆ ಸಿಲುಕಿಸಿದ್ದೇಕೆ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).