ಅಮ್ಮಾ... ಅಂತ ಅತ್ತರೂ ಬಿಡದ ರಾಕ್ಷಸರು! 5 ವರ್ಷದ ಮಗನ ಪ್ರಾಣ ಹೀರಿದ ಅನೈತಿಕ ಸಂಬಂಧದ ಕಥೆ! Child Homicide

Child Homicide (ಸಾಂದರ್ಭಿಕ ಚಿತ್ರ)
Child Homicide (ಸಾಂದರ್ಭಿಕ ಚಿತ್ರ)
Published on
ತೆಲಂಗಾಣ: ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಐದು ವರ್ಷದ ಮಗನನ್ನು ಅತ್ಯಂತ ಕ್ರೂರವಾಗಿ (Child Homicide) ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಕಾಮರೆಡ್ಡಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಪೊಲೀಸರ ಪ್ರಕಾರ, ಆರೋಪಿ ನರಸಿಂಹ ಕಳೆದ ಆರು ತಿಂಗಳಿನಿಂದ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದನು. ಪತಿಯಿಂದ ಪ್ರತ್ಯೇಕಗೊಂಡ ಮಹಿಳೆಯು ಇಬ್ಬರು ಮಕ್ಕಳನ್ನು ಹೊಂದಿದ್ದರು. ಆದಾಗ್ಯೂ, ಮಗ ಮಾನಸಿಕ ಅಸ್ವಸ್ಥನಾಗಿರುವುದರಿಂದ ತಮ್ಮ ಸಂಬಂಧಕ್ಕೆ ತೊಂದರೆಯಾಗುತ್ತಾನೆ ಎಂದು ಭಾವಿಸಿದ್ದಳು. ಹಾಗಾಗಿ ಈ ಮಗುವನ್ನು ಕೊಲ್ಲಲು ತಾಯಿ ಮತ್ತು ಆಕೆಯ ಪ್ರಿಯಕರ ಸಂಚಾಕಿದ್ದರು.
ಒಂದು ದಿನ ನರಸಿಂಹ ಕುಡಿದು ಮತ್ತಿನಲ್ಲಿ ಮನೆಯೊಳಗೆ ಪ್ರವೇಶಿಸಿದ್ದಾನೆ. ಈ ವೇಳೆ ಹುಡುಗ ಒಬ್ಬನೇ ಇರುವುದನ್ನು ಅರಿತುಕೊಂಡು ಆತನ ಕಣ್ಣಿಗೆ ಖಾರದ ಪುಡಿ ಎರಚಿದ್ದಾನೆ. ಈ ದಾಳಿಯಿಂದ ಮಗು ಕಿರುಚಾಡಲು ಪ್ರಾರಂಭಿಸಿದೆ. ಈ ವೇಳೆ ಅಲ್ಲೇ ಇದ್ದ ಕೋಲಿನಿಂದ ಮಗುವಿನ ತಲೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಅಸ್ವಸ್ಥಗೊಂಡ ಮಗು ಮೃತಪಟ್ಟಿದೆ.
ಈ ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸಿದ್ದು, ತಾಯಿ ಮತ್ತು ಆಕೆಯ ಪ್ರಿಯಕರನ ಮೇಲೆ ಸಂಶಯ ವ್ಯಕ್ತಪಡಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನರಸಿಂಹ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆದಾಗ್ಯೂ, ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಕೊಲೆ (IPC 302) ಸೇರಿದಂತೆ ವಿವಿಧ ಸಂಬಂಧಿತ ಕಾಯ್ದೆಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಈ ಘಟನೆ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ನೆಟ್ಟಿಗರು ಒಬ್ಬ ತಾಯಿ ತನ್ನ ಸ್ವಂತ ಮಗುವನ್ನು ಇಷ್ಟೊಂದು ಕ್ರೂರವಾಗಿ ನಡೆಸಿಕೊಳ್ಳಲು ಸಾಧ್ಯವೇ? ಮಾನವರು ತಮ್ಮ ಸ್ವಂತ ಮಕ್ಕಳನ್ನು ತಮ್ಮ ದಾರಿಯಲ್ಲಿ ಅಡೆತಡೆಗಳಾಗಿ ನೋಡಲು ಪ್ರಾರಂಭಿಸುತ್ತಾರೆಯೇ? ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net