ತನಗೆ ಕಚ್ಚಿದ ಸೊಳ್ಳೆಗಳನ್ನು ಕೊಂದು ತಂದು ನಗರಸಭೆಗೆ ದೂರು ಸಲ್ಲಿಸಿದ ವ್ಯಕ್ತಿ! Mosquitoes

Mosquitoes Raipur
Mosquitoes Raipur
Published on
ಛತ್ತೀಸ್‌ಗಢ : ( Mosquitoes)  ವ್ಯಕ್ತಿಯೊಬ್ಬ ಸೊಳ್ಳೆಗಳನ್ನು ಪ್ಲ್ಯಾಸ್ಟಿಕ್​​ ಕವರ್​ನಲ್ಲಿ ಹಾಕಿ ರಾಯ್‌ಪುರ ಮುನ್ಸಿಪಲ್ ಕಾರ್ಪೊರೇಷನ್ ಕಚೇರಿಗೆ ತಂದು, ತಮ್ಮ ನೆರೆಹೊರೆಯಲ್ಲಿರುವ ಸೊಳ್ಳೆಗಳ ಕಾಟದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಸೊಳ್ಳೆ ಸಮಸ್ಯೆಗೆ ವ್ಯಕ್ತಿ ತೆಗೆದುಕೊಂಡ ನಿರ್ಧಾರವೇನು ಗೊತ್ತಾ? 

ರಾಯ್‌ಪುರದ ವಾಮನ್‌ರಾವ್ ಲಾಖೆ ವಾರ್ಡ್‌ನ ನಿವಾಸಿಯಾಗಿರುವ ದೌಲಾಲ್ ಪಟೇಲ್ ಎಂಬ ವ್ಯಕ್ತಿ, ಸೊಳ್ಳೆ ಕಾಟದಿಂದ ಬೇಸರಗೊಂಡಿದ್ದನು. ಹೀಗೆ ಈ ಸಮಸ್ಯೆ ಮುಂದುವರೆದರೆ ಡೆಂಗ್ಯೂ ಬರಬಹುದೆಂದು ಗಾಬರಿಗೊಂಡು  ವೈದ್ಯರನ್ನು ಸಂಪರ್ಕಿಸಿದನು, ಅವರು ಸೊಳ್ಳೆಗಳ ಕುರಿತಾಗಿ ಜಾಗೃತಿವಹಿಸಲು ಸಲಹೆ ನೀಡುತ್ತಾರೆ.  ನಂತರ ಪಟೇಲ್  ತನ್ನನ್ನು ಕಚ್ಚಿದ ಸೊಳ್ಳೆಗಳನ್ನು  ಪ್ಯಾಕ್ ಮಾಡಿ, ನೇರವಾಗಿ ರಾಯ್‌ಪುರ ಮುನ್ಸಿಪಲ್ ಕಾರ್ಪೊರೇಷನ್ ಕಚೇರಿಗೆ ಬಂದಿದ್ದಾನೆ.
ಸಾಮಾಜಿಕ ಕಾರ್ಯಕರ್ತ ವಿಜಯ್ ಸೋನಾ ಮತ್ತು ಪುರಸಭೆಯ ವಿರೋಧ ಪಕ್ಷದ ನಾಯಕ ಆಕಾಶ್ ತಿವಾರಿ ಅವರೊಂದಿಗೆ ಪಟೇಲ್, ಪ್ಲ್ಯಾಸ್ಟಿಕ್​​ ಚೀಲದಲ್ಲಿ ಸುರಕ್ಷಿತವಾಗಿ ಮುಚ್ಚಿ ತಂದಿದ್ದ ಸೊಳ್ಳೆಗಳನ್ನು ನಾಗರಿಕ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಆರೋಗ್ಯ ಅಧಿಕಾರಿಗೆ ನೀಡಿದ್ದಾನೆ.
ಪಟೇಲ್ ಈ ವೇಳೆ ಆರೋಗ್ಯ ಅಧಿಕಾರಿಯೊಬ್ಬರ ಬಳಿ ಮಾತನಾಡಿ, ನಾನು ವೈದ್ಯರನ್ನು ಸಂಪರ್ಕಿಸಿದ್ದೇನೆ. ಅವರು ಸೊಳ್ಳೆಗಳನ್ನು ಪರೀಕ್ಷಿಸಲು ಸಲಹೆ ನೀಡಿರುವ ಮೇರೆಗೆ ಕೀಟಗಳನ್ನು ಸುರಕ್ಷಿತವಾಗಿ ಚೀಲದಲ್ಲಿ ಪುರಸಭೆಯ ಪ್ರಧಾನ ಕಚೇರಿಗೆ ತೆಗೆದುಕೊಂಡು ಹೋಗಿ ಪರೀಕ್ಷೆಗೆ ಸಲ್ಲಿಸಿರುವುದಾಗಿ ಹೇಳಿದ್ದಾನೆ.
ಪುರಸಭೆಯ ಅಧಿಕಾರಿಗಳು ಕೂಡಲೇ ವೈದ್ಯರನ್ನು ಸಂಪರ್ಕಿಸಿ ಭಯವನ್ನು ನಿವಾರಿಸಲು ಪರೀಕ್ಷೆಯನ್ನು ಏರ್ಪಡಿಸಿದರು. ಆದಾಗ್ಯೂ, ವರದಿಯ ನಂತರ ಈ ಕೀಟಗಳು ಡೆಂಗ್ಯೂ ವಾಹಕಗಳಲ್ಲ, ಸಾಮಾನ್ಯ ಸೊಳ್ಳೆಗಳು ಎಂದು ಕಂಡುಬಂದಿದೆ. 
ದೂರಿಗೆ ಪ್ರತಿಕ್ರಿಯಿಸಿದ ರಾಯ್‌ಪುರ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು, ಪೀಡಿತ ಪ್ರದೇಶಗಳಲ್ಲಿ ಫಾಗಿಂಗ್ ಕಾರ್ಯಾಚರಣೆಗಳು ಮತ್ತು ಲಾರ್ವಾ ವಿರೋಧಿ ಸಿಂಪಡಣೆಯನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು. ಸೊಳ್ಳೆ ನಿಯಂತ್ರಣ ಕ್ರಮಗಳಿಗಾಗಿ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಲಾಗಿದ್ದರೂ, ತೆರೆದ ಚರಂಡಿಗಳು ಮತ್ತು ಅಸಮರ್ಪಕ ಒಳಚರಂಡಿ ವ್ಯವಸ್ಥೆಗಳು ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಗಮನಿಸಿದರು.
ಸೊಳ್ಳೆಗಳ ಕಾಟ ಅಪಾಯಕಾರಿ ಮಟ್ಟವನ್ನು ತಲುಪಿದ್ದು, ಜನರು ಡೆಂಗ್ಯೂ ಮತ್ತು ಮಲೇರಿಯಾದ ನಿರಂತರ ಭಯದಲ್ಲಿ ಬದುಕುತ್ತಿದ್ದಾರೆ ಎಂದು ನಿವಾಸಿಗಳು ಹೇಳುತ್ತಾರೆ. ಕೆಲವು ವರ್ಷಗಳ ಹಿಂದೆ, ಅದೇ ಪ್ರದೇಶದ ಯುವಕನೊಬ್ಬ ಸೊಳ್ಳೆ ಕಡಿತದಿಂದ ಸಾವನ್ನಪ್ಪಿದ್ದನ್ನು ಸ್ಥಳೀಯರು ನೆನಪಿಸಿಕೊಂಡಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net