ಮಹಾರಾಷ್ಟ್ರ: ಗ್ರಾಮದಲ್ಲಿ ಕೇವಲ 3 ತಿಂಗಳಲ್ಲಿ 27,397 ಶಿಶುಗಳು ಜನಿಸಿವೆ ಎಂಬ ದಾಖಲೆಗಳು ಸದ್ಯ ಇಡೀ ಊರನ್ನೇ ಅಚ್ಚರಿಗೊಳಿಸಿದೆ. ಅಸಲಿಗೆ, ಗ್ರಾಮದ ಜನಸಂಖ್ಯೆ ಕೇವಲ 1,500 ಎಂಬುದು ಇಲ್ಲಿ ಭಾರೀ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಇದು ರಾಜ್ಯದ ಅತಿದೊಡ್ಡ ಜನನ ಪ್ರಮಾಣಪತ್ರ ಹಗರಣ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದು, ಕಡೆಗೂ ಅಕ್ರಮ ಬೆಳಕಿಗೆ ಬಂದಿದೆ.