'ಮೂಡ್ ಆಫ್ ದಿ ನೇಷನ್' ಎಂಬುದು 'ಇಂಡಿಯಾ ಟುಡೇ ಗ್ರೂಪ್' ಸುಮಾರು ಎರಡು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಅರ್ಧವಾರ್ಷಿಕ ಸಮೀಕ್ಷೆಯಾಗಿದೆ. 2026 ಆಗಸ್ಟ್ ತಿಂಗಳ ಆವೃತ್ತಿಯನ್ನು ಸಿ-ವೋಟರ್ ಸಂಸ್ಥೆಯು ನಡೆಸಿದ್ದು, ಇದಕ್ಕಾಗಿ ಜುಲೈ 1 ಮತ್ತು ಆಗಸ್ಟ್ 25ರ ನಡುವೆ ಸುಮಾರು 25,184 ಜನರನ್ನು ನೇರವಾಗಿ ಸಮೀಕ್ಷೆ ನಡೆಸಿದೆ.
ಈ ಸಮೀಕ್ಷೆಯ ಪ್ರಕಾರ, ಇಂದು ಚುನಾವಣೆ ನಡೆದ್ರೆ ಬಿಜೆಪಿ ವೈಯಕ್ತಿಕವಾಗಿ 261 ಸ್ಥಾನಗಳನ್ನು ಪಡೆಯಲಿದ್ದು, ಒಟ್ಟು ಎನ್ಡಿಎ ಮೈತ್ರಿಕೂಟದ 326 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳ ಬಗ್ಗೆ ಜೆನ್ ಜೀ ವಿರೋಧವನ್ನು ಬಿಜೆಪಿ ಎದುರಿಸುತ್ತಿರುವುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಇದೇ ಸಿ-ವೋಟರ್ ಜನವರಿ ನಡೆಸಿದ ಸಮೀಕ್ಷೆ ಪ್ರಕಾರ, ಬಿಜೆಪಿ 287 ಸ್ಥಾನಗಳಲ್ಲಿ ಗೆಲ್ಲಲಿದೆ ಮತ್ತು ಎನ್ಡಿಎ ಕೂಟ 352 ಸ್ಥಾನಗಳಲ್ಲಿ ಮೇಲುಗೈ ಸಾಧಿಸಲಿದೆ ಎಂದು ಅಂದಾಜಿಸಿತ್ತು. ಆದರೆ ಆರು ತಿಂಗಳಲ್ಲಿ ಅನೇಕ ಬದಲಾವಣೆ, ಅದರಲ್ಲೂ ಸಿಜೆಪಿಯ ಆಂದೋಲನ ಬಿಜೆಪಿಯ 20ಕ್ಕೂ ಹೆಚ್ಚು ಸ್ಥಾನಗಳ ಸಂಖ್ಯೆಗಳು ಕಡಿಮೆ ಬರುತ್ತವೆ ಎಂಬುದನ್ನು ಸೂಚಿಸಿದೆ.
ಮತ್ತೊಂದೆಡೆ ಸಂಖ್ಯಾಬಲವು ಕಾಂಗ್ರೆಸ್‌ಗೆ ಭರವಸೆ ನೀಡುತ್ತಿದ್ದು, ರಾಹುಲ್ ಗಾಂಧಿ ಬಿಜೆಪಿಯನ್ನು ಮೂಲೆಗುಂಪು ಮಾಡಲು ಹೊಸ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ. ಈ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಅಂತಹ ಹೆಚ್ಚಿನ ಸ್ಥಾನಗಳನ್ನು ಗಳಿಸದಿದ್ರೂ, ಪಕ್ಷವು 106 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಹೇಳಿದೆ (ಏಜೆನ್ಸೀಸ್).