ನವದೆಹಲಿ: ಕಳೆದ ಏಪ್ರಿಲ್‌ನಲ್ಲಿ ಸಂಸತ್ ಅಧಿವೇಶನ ಮುಕ್ತಾಯಗೊಂಡ ಬಳಿಕ ರಾಷ್ಟ್ರ ರಾಜಕೀಯದಲ್ಲಿ ಭಾರಿ ಏರುಪೇರುಗಳಾಗಿದ್ದು, ಇದೇ ಜುಲೈ 20 ರಿಂದ ಆರಂಭವಾಗಲಿದೆ ಎನ್ನಲಾದ ಮುಂಗಾರು ಅಧಿವೇಶನವು (Parliament Monsoon Session) ನಾಟಕೀಯ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ಪಕ್ಷಾಂತರ, ಹೊಸ ಮೈತ್ರಿಗಳು ಮತ್ತು ಪಕ್ಷಗಳ ವಿಲೀನದಿಂದಾಗಿ ಸದನದ ಸಂಖ್ಯಾಬಲದ ಚಿತ್ರಣವೇ ಬದಲಾಗಿದೆ. ನಾಲ್ಕು ವಾರಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಒಟ್ಟು 19 ಕಲಾಪಗಳಿದ್ದು, ಆಗಸ್ಟ್ 13 ರವರೆಗೆ ಜಿದ್ದಾಜಿದ್ದಿನ ಚರ್ಚೆಗಳು ನಡೆಯಲಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ.