

Indian Monsoon: ಭಾರತದಲ್ಲಿ ಕಳೆದ ಕೆಲವು ವಾರಗಳಿಂದ ಬಿರುಸಾಗಿದ್ದ ಮುಂಗಾರು (ಮಾನ್ಸೂನ್) ಮಳೆಯ ಅಬ್ಬರ ಸ್ವಲ್ಪ ತಗ್ಗುವ ಲಕ್ಷಣಗಳು ಗೋಚರಿಸುತ್ತಿವೆ. ದೇಶದ ಪ್ರಮುಖ ಭಾಗಗಳು ಹಾಗೂ ಬಂಗಾಳ ಕೊಲ್ಲಿಯ ಮೇಲಿದ್ದ ದಟ್ಟ ಮೋಡಗಳ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿರುವುದನ್ನು ಉಪಗ್ರಹ ಚಿತ್ರಗಳು (Satellite Imagery) ಖಚಿತಪಡಿಸಿವೆ.