ಈಗ ಎಲ್ಲಿದ್ದಾಳೆ ಕುಂಭಮೇಳದ ವೈರಲ್ ಸುಂದರಿ? ಮದುವೆ, ಲವ್ ಜಿಹಾದ್ ವಿವಾದದ ನಂತ್ರ ಹೇಗಿದೆ ಈಕೆಯ ಬದುಕು? Kumbh Mela Viral Girl

ಮಲಯಾಳಂನ 'ನಾಗಮ್ಮ' ಚಿತ್ರದ ಪೂಜಾ ಸಮಾರಂಭದಲ್ಲಿ ಮೊನಾಲಿಸಾ ಅವರಿಗೆ ನಟ ಫರ್ಮಾನ್ ಖಾನ್ ಪರಿಚಯವಾಗಿತ್ತು. ಈ ಚಿತ್ರದಲ್ಲಿ ಫರ್ಮಾನ್ ಖಳನಾಯಕನಾಗಿ ಹಾಗೂ ಮೊನಾಲಿಸಾ ನಾಯಕಿಯಾಗಿ ನಟಿಸುತ್ತಿದ್ದು, ಶೂಟಿಂಗ್ ಸೆಟ್‌ನಲ್ಲೇ ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು.
Kumbh Mela Viral Girl
ಫರ್ಮಾನ್ ಖಾನ್ ಹಾಗೂ ಮೊನಾಲಿಸಾ ಭೋಸ್ಲೆ
Published on: 

ನವದೆಹಲಿ: ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಾ, ತನ್ನ ಆಕರ್ಷಕ ಕಣ್ಣು ಮತ್ತು ಮುಗ್ಧ ನಗುವಿನಿಂದ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದ ಮೊನಾಲಿಸಾ ಭೋಸ್ಲೆ ( Kumbh Mela Viral Girl ) ಈಗ ಎಲ್ಲಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ. ಒಂದು ಕಾಲದಲ್ಲಿ ಕೊಳೆಗೇರಿಯಲ್ಲಿ ವಾಸಿಸುತ್ತಾ ಬದುಕು ಸಾಗಿಸುತ್ತಿದ್ದ ಈ ಹುಡುಗಿ, 'ಕುಂಭ ಬ್ಯೂಟಿ' ಎಂದೇ ಖ್ಯಾತಿ ಪಡೆದು ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದರು. ಆದರೆ, ಫರ್ಮಾನ್ ಖಾನ್ ಅವರೊಂದಿಗಿನ ವಿವಾಹ ಹಾಗೂ 'ಲವ್ ಜಿಹಾದ್' ವಿವಾದಗಳ ಸುಳಿಗೆ ಸಿಲುಕಿದ ನಂತರ ಆಕೆಯ ವೃತ್ತಿಜೀವನ ಮತ್ತು ವೈಯಕ್ತಿಕ ಬದುಕಿನಲ್ಲಿ ದೊಡ್ಡ ತಿರುವುಗಳೇ ಎದುರಾಗಿವೆ.

2025ರ ಪ್ರಯಾಗ್‌ರಾಜ್ ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾ ಅವರ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿ, ಅವರಿಗೆ ಬಾಲಿವುಡ್‌ನಿಂದ ಬಂಪರ್ ಆಫರ್‌ಗಳು ಹುಡುಕಿಕೊಂಡು ಬಂದಿದ್ದವು. ನಿರ್ದೇಶಕ ಸನೋಜ್ ಮಿಶ್ರಾ ಅವರು ತಮ್ಮ 'ದಿ ಡೈರಿ ಆಫ್ ಮಣಿಪುರ' ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ನೀಡಿದ್ದರು. ನಟನಾ ತರಬೇತಿ ಪಡೆದು 2026ರ ಫೆಬ್ರವರಿಯಲ್ಲಿ ಚಿತ್ರೀಕರಣವನ್ನೂ ಪೂರ್ಣಗೊಳಿಸಲಾಗಿತ್ತು. ಆದರೆ, ಸಿನಿಮಾ ಬಿಡುಗಡೆಯಾಗುವ ಮೊದಲೇ ಮೊನಾಲಿಸಾ ಬದುಕಿನಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದುಹೋಯಿತು.

Also Read
ಶಬರಿಮಲೆ ಭಕ್ತರೇ ಈ ಖತರ್ನಾಕ್​ ಮಹಿಳೆಯರ ಟಾರ್ಗೆಟ್: ಒಳಉಡುಪಲ್ಲಿ ಕಂತೆ ಕಂತೆ ಹಣ ಪತ್ತೆ, ಸಿಕ್ಕಿಬಿದ್ದಿದ್ದೇ ರೋಚಕ! Sabarimala Pilgrims
Kumbh Mela Viral Girl

ಮಲಯಾಳಂನ 'ನಾಗಮ್ಮ' ಚಿತ್ರದ ಪೂಜಾ ಸಮಾರಂಭದಲ್ಲಿ ಮೊನಾಲಿಸಾ ಅವರಿಗೆ ನಟ ಫರ್ಮಾನ್ ಖಾನ್ ಪರಿಚಯವಾಗಿತ್ತು. ಈ ಚಿತ್ರದಲ್ಲಿ ಫರ್ಮಾನ್ ಖಳನಾಯಕನಾಗಿ ಹಾಗೂ ಮೊನಾಲಿಸಾ ನಾಯಕಿಯಾಗಿ ನಟಿಸುತ್ತಿದ್ದು, ಶೂಟಿಂಗ್ ಸೆಟ್‌ನಲ್ಲೇ ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು. ಬಳಿಕ 2026ರ ಮಾರ್ಚ್ 11ರಂದು ಕೇರಳದ ತಿರುವನಂತಪುರಂನ ದೇವಸ್ಥಾನವೊಂದರಲ್ಲಿ ಇಬ್ಬರೂ ವಿವಾಹವಾದರು. ಮನೆಯವರು ತನ್ನನ್ನು ಬಲವಂತವಾಗಿ ಕರೆದೊಯ್ಯಬಹುದು ಎಂಬ ಭಯದಿಂದ ಪೊಲೀಸ್ ರಕ್ಷಣೆಯನ್ನೂ ಕೋರಿದ್ದ ಮೊನಾಲಿಸಾ, ಕುಟುಂಬದ ಒತ್ತಡದಿಂದ ರಹಸ್ಯವಾಗಿ ಮದುವೆಯಾಗಬೇಕಾಯಿತು ಹಾಗೂ ತಾನು ಸ್ವಇಚ್ಛೆಯಿಂದಲೇ ಫರ್ಮಾನ್ ಜತೆಗಿರುವುದಾಗಿ ಸ್ಪಷ್ಟಪಡಿಸಿದ್ದರು.

ಇಬ್ಬರೂ ಬೇರೆ ಬೇರೆ ಧರ್ಮಗಳಿಗೆ ಸೇರಿದವರಾದ ಕಾರಣ, ಇವರ ಮದುವೆಯ ಸುದ್ದಿ ಹೊರಬೀಳುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಯಿತು. ಕೆಲವರು ಇದನ್ನು 'ಲವ್ ಜಿಹಾದ್' ಎಂದು ಕರೆದರೆ, ಸ್ವತಃ ಮೊನಾಲಿಸಾ ತಂದೆಯೇ ತನ್ನ ಮಗಳು ಲವ್ ಜಿಹಾದ್ ಬಲೆಗೆ ಬಿದ್ದಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದರು. ಆದರೆ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ದಂಪತಿ, ಹಿಂದೂ ಸಂಪ್ರದಾಯದಂತೆ ದೇವಸ್ಥಾನದಲ್ಲಿ ಮದುವೆಯಾಗಿದ್ದು, ಯಾವುದೇ ಮತಾಂತರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಮದುವೆಯ ಸಮಯದಲ್ಲಿ ಆಕೆಗೆ 16 ವರ್ಷ ಎಂಬ ಗೊಂದಲ ಎದ್ದಿದ್ದರೂ, ತನಗೆ 18 ವರ್ಷ ತುಂಬಿದೆ ಎಂದು ಮೊನಾಲಿಸಾ ಹೇಳಿಕೊಂಡಿದ್ದು, ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ.

ವಿವಾದಗಳ ನಡುವೆಯೂ ಮೊನಾಲಿಸಾ ಸದ್ಯ ಸೋಶಿಯಲ್ ಮೀಡಿಯಾ ಮತ್ತು ಯೂಟ್ಯೂಬ್‌ನಲ್ಲಿ ಸಖತ್ ಬಿಜಿಯಾಗಿದ್ದಾರೆ. ಪತಿ ಫರ್ಮಾನ್ ಖಾನ್ ಜತೆ ಸೇರಿ ನಿರಂತರವಾಗಿ ರೀಲ್ಸ್ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ, ನೆಗೆಟಿವ್ ಕಾಮೆಂಟ್‌ಗಳು ಹಾಗೂ ಟ್ರೋಲಿಂಗ್‌ಗೆ ಹೆದರಿ ಅವರು ತಮ್ಮ ವಿಡಿಯೋಗಳ ಕಾಮೆಂಟ್ ಸೆಕ್ಷನ್ ಅನ್ನು ಆಫ್ (Disable) ಮಾಡಿ ಇಟ್ಟಿದ್ದಾರೆ.

Also Read
50 ಕೋಟಿ ಜನರು ಬಡತನದಿಂದ ಮುಕ್ತಿ; ದೇಶದ ಜನತೆಗೆ ಹಣ ಉಳಿತಾಯಕ್ಕೆ ಪ್ರಧಾನಿ ಮೋದಿ ಕರೆ | PM Modi
Kumbh Mela Viral Girl

ಇನ್ನೊಂದೆಡೆ, ಅವರ ಮಹತ್ವಾಕಾಂಕ್ಷೆಯ ಬಾಲಿವುಡ್ ಚಿತ್ರ 'ದಿ ಡೈರಿ ಆಫ್ ಮಣಿಪುರ' ಸ್ಥಗಿತಗೊಂಡಿದೆ. ಚಿತ್ರೀಕರಣದ ವೇಳೆ ನಿರ್ದೇಶಕ ಸನೋಜ್ ಮಿಶ್ರಾ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮೊನಾಲಿಸಾ ಆರೋಪಿಸಿದ್ದು, ಇದನ್ನು ನಿರಾಕರಿಸಿರುವ ನಿರ್ದೇಶಕರು ಇನ್ನು ಮುಂದೆ ಆ ಚಿತ್ರವನ್ನು ಬಿಡುಗಡೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಆದರೂ ಮೊನಾಲಿಸಾ ಸಿನಿಮಾ ಪಯಣ ಸಂಪೂರ್ಣವಾಗಿ ನಿಂತಿಲ್ಲ, ತಾವು ನಟಿಸಿರುವ ಎರಡು ದಕ್ಷಿಣ ಭಾರತದ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ ಎಂದು 2026ರ ಮಾರ್ಚ್‌ನಲ್ಲಿ ಅವರು ತಿಳಿಸಿದ್ದು, ಇತ್ತೀಚೆಗೆ ತೆಲುಗು ನಟಿ ಕಲ್ಪಲತಾ ಅವರೊಂದಿಗಿನ ವಿಡಿಯೋದಲ್ಲೂ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ, (ಏಜೆನ್ಸೀಸ್​).