ಮೊನಾಲಿಸಾ ಪೋಕ್ಸೊ ಪ್ರಕರಣ: ನಾನು ಅಪ್ರಾಪ್ತೆಯಲ್ಲ, ನನ್ನ ಗಂಡ ನಿರಪರಾಧಿ; ಪತಿ ಫರ್ಮಾನ್​ ಬೆನ್ನಿಗೆ ನಿಂತ ಕುಂಭಮೇಳ ಸುಂದರಿ! Monalisa Bhosle POCSO Case

ನಾನು ಮದುವೆಯಾಗುವಾಗ ವಯಸ್ಕಳಾಗಿದ್ದೆ: ಮೊನಾಲಿಸಾ
ನಾನು ಮದುವೆಯಾಗುವಾಗ ವಯಸ್ಕಳಾಗಿದ್ದೆ: ಮೊನಾಲಿಸಾ
Published on

ಪ್ರಮುಖ ಮುಖ್ಯಾಂಶಗಳು

  • ಕುಂಭಮೇಳ ಸುಂದರಿ ಮೊನಾಲಿಸಾ ಪೋಕ್ಸೊ ಪ್ರಕರಣ
  • ನಾನು ಮದುವೆಯಾಗುವಾಗ ವಯಸ್ಕಳಾಗಿದ್ದೆ: ಮೊನಾಲಿಸಾ
  • ಇಂದೋರ್​ ಹೈಕೋರ್ಟ್​ಗೆ ಮೊನಾಲಿಸಾ ಅರ್ಜಿ
  • ನನ್ನ ಗಂಡ ನಿರಪರಾಧಿ ಎಂದ ಕುಂಭಮೇಳ ಗರ್ಲ್​
ಇಂದೋರ್​: ಕುಂಭಮೇಳದಲ್ಲಿ ರುದ್ರಾಕ್ಷಿ ಹಾಗೂ ಮಣಿ ಸರಗಳನ್ನು ಮಾರಾಟ ಮಾಡುವ ಮೂಲಕ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗಿದ್ದ ಮೊನಾಲಿಸಾ ಭೋಸ್ಲೆ (Monalisa Bhosle POCSO Case), ಈಗ ಕೆಲ ದಿನಗಳಿಂದ ತನ್ನ ವೈವಾಹಿಕ ಜೀವನದಿಂದಾಗಿ ಮತ್ತೆ ಮುನ್ನಲೆಗೆ ಬಂದಿದ್ದಾಳೆ.
ಕೆಲ ತಿಂಗಳುಗಳ ಹಿಂದೆ ಮೊನಾಲಿಸಾ ಭೋಸ್ಲೆ ಉತ್ತರಪ್ರದೇಶದ ಫರ್ಮಾನ್​ ಖಾನ್​ ಎಂಬಾತನನ್ನು ಮದುವೆಯಾಗುವ ಮೂಲಕ ಲವ್​ ಜಿಹಾದ್​ ವದಂತಿಗೆ ದಾರಿ ಮಾಡಿ ಕೊಟ್ಟಿದ್ದಳು. ನಂತರ ಇಕೆ ಅಪ್ರಾಪ್ತೆ ಎಂಬ ಕಾರಣಕ್ಕೆ ಪೋಕ್ಸೊ ಪ್ರಕರಣ ದಾಖಲಾದ ಹಿನ್ನಲೆ ಮೊನಾಲಿಸಾ ಇಂದೋರ್ ಹೈಕೋರ್ಟ್​ ಮೆಟ್ಟಿಲನ್ನು ಏರಿದ್ದಾಳೆ.

ಪತಿ ಪರ ನಿಂತ ಮೊನಾಲಿಸಾ!

ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೋರ್ ಹೈಕೋರ್ಟ್​ಗೆ ಹಾಜರಾಗಿದ್ದ ಮೊನಾಲಿಸಾ, ತಾನು ಫರ್ಮಾನ್ ಖಾನ್​ನನ್ನು ಪ್ರೀತಿಸಿ ಮದುವೆಯಾಗಿದ್ದೆನೆ, ಹಾಗೂ ಮದುವೆಯಾಗುವಾಗ ನಾನು ವಯಸ್ಕಳಾಗಿದ್ದೆ ಎಂದಿರುವ ಮೊನಾಲಿಸಾ, ತನ್ನ ಆಧಾರ್​ ಕಾರ್ಡ್​ ಹಾಗೂ ಮತದಾರರ ಗುರುತಿನ ಚೀಟಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾಳೆಂದು ತಿಳಿದು ಬಂದಿದೆ.
ನಾನು 2008 ರಲ್ಲಿ ಜನಿಸಿದ್ದೆನೆ ಆದರೆ, 2009 ರಲ್ಲಿ ನಾನು ಹುಟ್ಟಿದ್ದೆನೆಂದು ತಪ್ಪು ಭಾವಿಸಿ ನನ್ನ ಪತಿ ಮೇಲೆ ಪೋಕ್ಸೊ ಪ್ರಕರಣ ದಾಖಲಾಗಿದೆ. ನಾನು ಅವರನ್ನು ಪ್ರೀತಿಸಿ ಕೇರಳದಲ್ಲಿ ಮದುವೆಯಾಗಿದ್ದೆನೆ ಎಂದು ಮೊನಾಲಿಸಾ ತನ್ನ ಅರ್ಜಿಯಲ್ಲಿ ತಿಳಿಸಿದ್ದಾಳೆ.

ರಾಷ್ಟ್ರೀಯ ಪರಿಶಿಷ್ಟ ಪಂಗಡ ಎಫ್​ಐಆರ್​!

ಕುಂಭಮೇಳದಲ್ಲಿ ಮಣಿಸರ ಮಾರುವ ಮೂಲಕ ಖ್ಯಾತಿ ಗಳಿಸಿದ ಮೊನಾಲಿಸಾ ಮಾರ್ಚ್​ 2026 ರಲ್ಲಿ ಉತ್ತರ ಪ್ರದೇಶದ ಫರ್ಮಾನ್​ ಖಾನ್​ ಎಂಬಾತನನ್ನು ಕೇರಳದಲ್ಲಿ ಮದುವೆಯಾಗುವ ಮೂಲಕ ಮತ್ತೆ ಸೋಷಿಯಲ್​ ಮೀಡಿಯಾನಲ್ಲಿ ಸದ್ದು ಮಾಡಿದಳು.
ಆದರೆ ಮೊನಾಲಿಸಾ ಮದುವೆಯಾಗಲು ವಯಸ್ಕಳಾಗಿರಲಿಲ್ಲ ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗ ಮೊನಾಲಿಸಾ ಪತಿ ಫರ್ಮಾನ್​ ಖಾನ್​ ಮೇಲೆ ಪೋಕ್ಸೊ ಪ್ರಕರಣಲ್ಲಿ ಎಫ್​ಐಆರ್​ ದಾಖಲಿಸಿಕೊಂಡಿತ್ತು. ದೂರಿನಲ್ಲಿ ಮೊನಾಲಿಸಾ 2009, ಡಿಸೆಂಬರ್​ 30 ರಂದು ಜನಿಸಿದ್ದು ಇಕೆ ಬಾಲ್ಯವಿವಾಹವಾಗಿದ್ದಾಳೆ ಎಂದು ನಮೂದಿಸಲಾಗಿದ್ದು, ಸದ್ಯ ಈ ಪ್ರಕರಣದ ವಿಚಾರಣೆಯನ್ನು ಇಂದೋರ್ ಹೈಕೋರ್ಟ್​ ನಡೆಸುತ್ತಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net