ಮೋಹನ್‌ಲಾಲ್ ಮನೆಯಲ್ಲಿದೆ 10 ಆನೆದಂತ, 13 ವಿಗ್ರಹಗಳು: ಅರಣ್ಯ ಇಲಾಖೆಗೆ ಸ್ವತಃ ಮಾಹಿತಿ ಕೊಟ್ಟ ಮಾಲಿವುಡ್ ನಟ!..Mohanlal

Mohanlal declares that he have elephant tusks ivory idols
Mohanlal declares that he have elephant tusks ivory idols
Published on

ಪ್ರಮುಖ ಮುಖ್ಯಾಂಶಗಳು

  • ಮೋಹನ್​ ಲಾಲ್​ ಅವರ ಬಳಿ ಆನೆ ದಂತ ಹಾಗೂ 13 ದಂತದಿಂದ ತಯಾರಿಸಿದ ವಿಗ್ರಹವಿದೆ.
  • 2011ರಲ್ಲಿ ದಾಖಲಾಗಿದ್ದ ಪ್ರಕರಣ ಮತ್ತೆ ಮುನ್ನೆಲೆಗೆ.
  • ಮಲಯತ್ತೂರು ವಿಭಾಗೀಯ ಅರಣ್ಯ ಕಚೇರಿಯ ಅಧಿಕಾರಿಗಳಿಂದ ಮಾಹಿತಿ ಬಹಿರಂಗ.
ತಿರುವನಂತಪುರಂ: ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಹೊಂದಿದ್ದಾರೆ ಎನ್ನುವ ಆರೋಪ ಎದುರಿಸುತ್ತಿರುವ ಮಾಲಿವುಡ್​ ನಟ ಮೋಹನ್​​ ಲಾಲ್​ ಅವರು, ತಮ್ಮ ಬಳಿ ಹತ್ತು ಆನೆ ದಂತ ಹಾಗೂ 13 ದಂತದಿಂದ ತಯಾರಿಸಿದ ವಿಗ್ರಹವಿದೆ ಎಂದು ಕೇರಳ ಅರಣ್ಯ ಇಲಾಖೆಗೆ ರಾಜ್ಯದ ವನ್ಯಜೀವಿ ಕ್ಷಮಾದಾನ ಯೋಜನೆಯಡಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆ ಬಗ್ಗೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಅರಣ್ಯ ಇಲಾಖೆ ಹೇಳಿದ್ದೇನು?

ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಹೊಂದಿರುವವರು ಸ್ವಯಂಪ್ರೇರಣೆಯಿಂದ ಅರಣ್ಯ ಇಲಾಖೆಗೆ ಹಿಂತಿರುಗಿಸುವ ಸಲುವಗಿ ಇಲಾಖೆ ಕ್ಷಮಾದಾನ ಯೋಜನೆ ಜಾರಿ ತಂದಿತ್ತು. ಇದರ ಭಾಗವಾಗಿ ನಟ ಮೋಹನ್​ ಲಾಲ್​ ಅವರು ತಮ್ಮ ಬಳಿ ಇರುವ ವಸ್ತುಗಳ ಬಗ್ಗೆ ಘೋಷಿಸಿದ್ದಾರೆ ಎಂದು ಮಲಯತ್ತೂರು ವಿಭಾಗೀಯ ಅರಣ್ಯ ಕಚೇರಿಯ ಅಧಿಕಾರಿಗಳು ತಿಳಿಸಿದರು.

ದಂತದಿಂದ ತಯಾರಿಸಿದ ಕೃಷ್ಣ, ರಾಮನ ವಿಗ್ರಹ ಇದೆ

ಈ ಹಿಂದೆ ಮೋಹನ್​​ ಲಾಲ್​ ಅವರು ತಮ್ಮ ಬಳಿ 4 ಆನೆ ದಂತ ಇದೆ ಎಂದು ಹೇಳಿದ್ದರು. ಆದರೆ ಇದೀಗ ಆರು ಇದೆ ಎಂದು ಹೇಳಿದ್ದಾರೆ. ಜೊತೆಗೆ ಆನೆ ದಂತದಲ್ಲಿ ನಿರ್ಮಾಣವಾದ ಕೃಷ್ಣ, ರಾಮ ಹಾಗೂ ತಿರುಪತಿ ಸೇರಿದಂತೆ 13 ವಿಗ್ರಹಗಳ ಸಂಗ್ರಹವಿದೆ ಎಂದು ಹೇಳಿಕೊಂಡಿದ್ದಾರೆ. ಅದರ ತೂಕ 46 ಕೆಜಿ ಎಂದು ಹೇಳಿರುವುದನ್ನು ಇಲಾಖೆ ಉಲ್ಲೇಖಿಸಿದೆ.

ಮೋಹನ್​ ಲಾಲ್ ಹೇಳಿದ್ದೇನು?

ಸದ್ಯ ನಾನು ಉಲ್ಲೇಖಿಸಿರುವ ದಂತಗಳು ಅನುವಂಶಿಕವಾಗಿ ಬಂದಿರುವಂತದ್ದು. ಕೆಲವೊಂದನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಮೋಹನ್​​ ಲಾಲ್​ ಅವರ ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ತನಿಖೆ ನಡೆಸುತ್ತದೆ ಎನ್ನಲಾಗಿದೆ.
ಮೋಹನ್​ ಲಾಲ್​ ವಿರುದ್ಧ ಕೇಳಿಬಂದಿರುವ ಈ ಆರೋಪ 2011ರದ್ದು. ಆದಾಯ ತೆರಿಗೆ ಇಲಾಖೆ ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಮಯದಲ್ಲಿ ಆನೆಯ ದಂತ ಹಾಗೂ ಅವುಗಳಿಂದ ತಯಾರಾದ ವಿಗ್ರಹವಿದೆ ಎಂದು ಹೇಳಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net