ಇಂಧನ ಉಳಿಸಿ ಎಂದ ಮೋದಿಜಿ; 84 ಕ್ಕೆ ಏರಿದ ಸಿಎನ್​ಜಿ: ಆಟೋ ರಿಕ್ಷಾ ಬಾಡಿಗೆ ಹೆಚ್ಚಳ; ಸಾಮಾನ್ಯರಿಗೆ ತಪ್ಪದ ಉಪಟಳ! CNG Price Hike

ಮುಂಬೈನಲ್ಲಿ ಸಿಎನ್‌ಜಿ ಬೆಲೆ ಕೆಜಿಗೆ 84 ರೂಪಾಯಿಗೆ ಏರಿಕೆ
ಮುಂಬೈನಲ್ಲಿ ಸಿಎನ್‌ಜಿ ಬೆಲೆ ಕೆಜಿಗೆ 84 ರೂಪಾಯಿಗೆ ಏರಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಮುಂಬೈನಲ್ಲಿ ಸಿಎನ್‌ಜಿ ಬೆಲೆ ಕೆಜಿಗೆ 84 ರೂಪಾಯಿಗೆ ಏರಿಕೆ
  • ಪ್ರಧಾನಿ ಹೇಳಿಕೆ ಬೆನ್ನಲೆ ಏರಿಕೆ ಕಂಡ ಸಿಎನ್​ಜಿ
  • ಆಟೋ ರಿಕ್ಷಾ ಬಾಡಿಗೆ ಹೆಚ್ಚಳ
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್​, ಡೀಸೆಲ್​ ಬಳಕೆಯನ್ನು ಮಿತಗೊಳಿಸಿ, ವಿದೇಶ ಪ್ರಯಾಣವನ್ನು ಕಡಿತಗೊಳಿಸಿ ಎಂದು ಹೇಳಿಕೆ ನೀಡಿದ ಬೆನ್ನಲ್ಲೆ ಕಂಪ್ರೆಸ್ಡ್​ ನ್ಯಾಚುರಲ್​ ಗ್ಯಾಸ್​ (CNG) ಬೆಲೆ ಮತ್ತೊಮ್ಮೆ ಏರಿಕೆ (CNG Price Hike) ಕಂಡಿದೆ.
ಪ್ರಧಾನಿಗಳು ಸಾಂಪ್ರದಾಯಿಕ ಇಂಧನಗಳ ಬಳಕೆಯನ್ನು ಕಡಿಮೆ ಮಾಡುವಂತೆ ದೇಶದ ನಾಗರಿಕರಿಗೆ ಕೇಳಿಕೊಂಡ ಪರಿಣಾಮ, ಮುಂಬೈ ಮೆಟ್ರೋ ಪೊಲಿಟನ್​ ರಿಜನ್​, ಸಿಎನ್​ಜಿಯ ಬೆಲೆಯನ್ನು ಮತ್ತೊಮ್ಮೆ ಏರಿಕೆ ಮಾಡಿ ಈಗ ಕೆಜಿ ಸಿಎನ್​ಜಿ ಬೆಲೆ 84 ರೂಪಾಯಿ ತಲುಪಿದೆ.
ಬೆಲೆ ಏರಿಕೆ ಮಾಡಿರುವ ಮಹಾನಗರ್​ ಗ್ಯಾಸ್​ ಲಿಮಿಟೆಡ್​ ಕಂಪನಿ ಮಾರುಕಟ್ಟೆಯಲ್ಲಿ ಸಿಎನ್​ಜಿಯ ಬೇಡಿಕೆ ಅಧಿಕವಾಗುತ್ತಿರುವ ಕಾರಣ ಈ ಬೆಲೆ ಏರಿಕೆಯನ್ನು ಮಾಡಲಾಗಿದೆ ಎಂದು ತಿಳಿಸಿದೆ. ಹಾಗೆಯೇ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಅಂತ್ಯವಾಗದ ಹಿನ್ನಲೆ ಈ ಬೆಲೆ ಏರಿಕೆ ಮುಂದಿನ ದಿನಗಳಲ್ಲಿ ಸಹ ಮುಂದುರಿಯಲಿದೆ ಎಂದು ತಿಳಿಸಿದ್ದಾರೆ.
ಆಟೋ ಬಾಡಿಗೆ ಹೆಚ್ಚಳ ಸಾಧ್ಯತೆ!
ಸಿಎನ್​ಜಿ ಬೆಲೆ ಏರಿಕೆಯಾಗುತ್ತಿದಂತೆ ಆಟೋ ರಿಕ್ಷಾ ಚಾಲಕರು ತಮ್ಮ ಬಾಡಿಗೆ ಬೆಲೆಯನ್ನು ಏರಿಕೆ ಮಾಡುವುದಾಗಿ ತಿಳಿಸಿದ್ದಾರೆ. ನಾವು ದಿನದ ದುಡಿಮೆಯನ್ನು ನಂಬಿಕೊಂಡು ಬದುಕುವ ವರ್ಗವಾಗಿದ್ದೆವೆ. ಒಂದು ಕಡೆ ಪೆಟ್ರೋಲ್​, ಡೀಸೆಲ್​ ದೊರೆಯುತ್ತಿಲ್ಲ, ಇನ್ನೊಂದು ಕಡೆ ಸಿಎನ್​ಜಿ ಬೆಲೆ ಕೂಡ ಏರಿಯಾದರೆ ನಾವು ಜೀವನ ಹೇಗೆ ನಡೆಸಬೇಕು? ಹೀಗಾಗಿ ನಾವು ಕೂಡ ಬಾಡಿಗೆ ಬೆಲೆಯನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಆಟೋ ರಿಕ್ಷಾ ಯೂನಿಯನ್​ ಅವರು ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net