ಮೋದಿ ಒಬ್ಬ ಭಯೋತ್ಪಾದಕ: ಪ್ರಧಾನಿ ವಿರುದ್ಧ ನಾಲಿಗೆ ಹರಿಬಿಟ್ಟ ಮಲ್ಲಿಕಾರ್ಜುನ್ ಖರ್ಗೆ; ವಿವಾದದ ಬಳಿಕ ಸ್ಪಷ್ಟನೆ! Mallikarjun Kharge on PM Modi
ಮೋದಿ ಒಬ್ಬ ಭಯೋತ್ಪಾದಕ ಎಂದ ಕಾಂಗ್ರೆಸ್ ಮುಖ್ಯಸ್ಥ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪ್ರಧಾನಿ ಮೇಲೆ ನಾಲಿಗೆ ಹರಿಬಿಟ್ಟ ಮಲ್ಲಿಕಾರ್ಜುನ್ ಖರ್ಗೆ
ಮೋದಿ ಒಬ್ಬ ಭಯೋತ್ಪಾದಕ ಎಂದ ಕಾಂಗ್ರೆಸ್ ಮುಖ್ಯಸ್ಥ
ಇವರಿಗೆ ನಕ್ಸಲರು ದೇಶಭಕ್ತರು; ಆರ್ಎಸ್ಎಸ್ನವರು ವಿಷಸರ್ಪ ಎಂದ ಶೆಹಜಾದ್ ಪೂನಾವಾಲಾ
ಚೆನ್ನೈ: ಗುರುವಾರ (ಏ.21) ವಿಧಾನಸಭಾ ಚುನಾವಣೆ ಪ್ರಯುಕ್ತ ತಮಿಳುನಾಡಿನಲ್ಲಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮುಖ್ಯಸ್ಥ ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (Mallikarjun Kharge on PM Modi) ಅವರನ್ನು ಭಯೋತ್ಪಾದಕ ಎಂದು ಕರೆಯುವ ಮೂಲಕ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಮೋದಿ ಒಬ್ಬ ಭಯೋತ್ಪಾದಕ!
ಮಾಹಿತಿಗಳ ಪ್ರಕಾರ, ಚೆನ್ನೈನಲ್ಲಿ ಮಾತನಾಡಿದ ಮಲ್ಲಿಕಾರ್ಜನ್ ಖರ್ಗೆ, ಈ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನೇತ್ರ ಕಳಗಂ (ಎಐಎಡಿಎಂಕೆ) ಪಕ್ಷದವರು ಅದು ಹೇಗೆ ಅಣ್ಣಾ ಧುರೈ ಅವರ ಫೋಟೊವನ್ನು ಬಳಸಿ ಕೊಳ್ಳುತ್ತಾರೆ.
ಇವರು ಆ ಮೋದಿ ಜೊತೆ ಏಕೆ ಕೈ ಜೋಡಿಸಿದ್ದಾರೆ, ಅವರೊಬ್ಬ ಭಯೋತ್ಪಾದಕ, ಅವರ ಪಕ್ಷ ಸಮಾನತೆ ಮತ್ತು ನ್ಯಾಯದಲ್ಲಿ ನಂಬಿಕೆಯಿಲ್ಲದ ಪಕ್ಷದ ಜೊತೆ ಈ ಸ್ಥಳೀಯ ಪಕ್ಷ ಏಕೆ ಸೇರಿಕೊಳ್ಳಬೇಕೆಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ ನೀಡಿದ್ದಾರೆ.
ವಿರೋಧದದ ನಂತರ ಸ್ಪಷ್ಟನೆ
ನಂತರ ಈ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾದ ಹಿನ್ನಲೆ, ಇನ್ನೊಂದು ಪತ್ರಿಕಾಗೋಷ್ಠಿಯಲ್ಲಿ
ಮೋದಿ ಕೇವಲ ಹೆದರಿಸುತ್ತಾನೆ!
ನಾನು ಪ್ರಧಾನಿ ಅವರನ್ನು ಭಯೋತ್ಪಾದಕ ಎಂದು ನೇರವಾಗಿ ಹೇಳುತ್ತಿಲ್ಲ, ಆದರೆ ಮೋದಿ ಯಾವಾಗಲೂ ಜನರನ್ನು ಹೆದರಿಸುತ್ತಾನೆ, ಯಾರಾದರೂ ಅವನನ್ನು ಪ್ರಶ್ನಿಸಲು ಮುಂದಾದರೆ ಅವರ ಮೇಲೆ ಇಡಿ, ಸಿಬಿಐ, ಐಟಿ ಅಧಿಕಾರಿಗಳನ್ನು ಛೂಬಿಡುತ್ತಾನೆಂದು ಮಲ್ಲಿಕಾರ್ಜುನ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:
ಚುನಾವಣಾ ನೀತಿ ಸಂಹಿತೆಯನ್ನು ಪ್ರಧಾನಿ ಉಲ್ಲಂಘಿಸಿದ್ದಾರೆ
ಅಂತೆಯೇ ಪ್ರಧಾನಿಗಳು ಪಂಚರಾಜ್ಯ ಚುನಾವಣೆಯಿರುವ ಸಂದರ್ಭದಲ್ಲಿ ರಾಜಕೀಯ ಲಾಭವನ್ನು ಪಡೆಯಲು ಮಹಿಳಾ ಮೀಸಲಾತಿಯ ನಾಟಕವಾಡಿದರು. ಆದರೆ ಈ ಮಹಿಳಾ ಮೀಸಲಾತಿ ಎನ್ನುವುದು 2023 ರಲ್ಲಿಯೇ ಜಾರಿಗೆ ಬಂದಿದೆ. ಕಾಂಗ್ರೆಸ್ ಪಕ್ಷ ಯಾವಾಗಲೂ ಮೀಸಲಾತಿಯನ್ನು ವಿರೋಧಿಸಿಲ್ಲ, ಆದರೆ ನಾವು ಈ ಡಿಲೀಮಿಟೇಶನನ್ನು ಮಾತ್ರ ವಿರೋಧಿಸಿದ್ದೆವೆ ಎಂದು ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ:
ಖರ್ಗೆ ಹೇಳಿಕೆಯನ್ನು ವಿರೋಧಿಸಿದ ಬಿಜೆಪಿ ವಕ್ತಾರ
ಪ್ರಧಾನಿ ಅವರನ್ನು ಭಯೋತ್ಪಾದಕರಿಗೆ ಹೋಲಿಸಿದ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆಯನ್ನು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ವಿರೋಧ ವ್ಯಕ್ತ ಪಡಿಸಿದ್ದಾರೆ.
ಕಾಂಗ್ರೆಸ್ವನರಿಗೆ ನಕ್ಸಲರು ಮತ್ತು ಅಫ್ಜಲ್ ಯಾಕೂಬ್ನಂತವರು ಮುಗ್ದರಾಗಿರುತ್ತಾರೆ. ಆದರೆ ಒಬ್ಬ ಓಬಿಸಿ ಚಾಯ್ವಾಲಾ ಇವರಿಗೆ ಭಯೋತ್ಪಾದಕನಂತೆ ಕಾಣುತ್ತಾನೆ. ಇವರಿಗೆ ಜಿಹಾದ್ ಬಗ್ಗೆ ವಿರೋಧವಿಲ್ಲ, ಆದರೆ ಆರ್ಎಸ್ಎಸ್ ಮತ್ತು ಸನಾತನ ಧರ್ಮ ವಿಷಸರ್ಪದಂತೆ ಕಾಣಿಸುತ್ತದೆ ಎಂದು ಟ್ವಿಟ್ ಮಾಡಿದ್ದಾರೆ, (ಏಜನ್ಸೀಸ್).