ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಜಾರ್ಜಿಯಾ ಮೆಲೋನಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, “ಭಾರತದಿಂದ ನನಗೆ ತುಂಬಾ ವಿಶೇಷ ಉಡುಗೊರೆ ಬಂದಿದೆ” ಎಂದು ಮೆಲೋನಿ ಹೇಳುತ್ತಾರೆ. ಬಳಿಕ ಪ್ರಧಾನಿ ಮೋದಿ ಕೈಯಲ್ಲಿ ‘Melody’ ಚಾಕೊಲೇಟ್ ಪ್ಯಾಕೆಟ್ ಹಿಡಿದು “Melodi” ಎಂದು ನಗುತ್ತಾ ಹೇಳುವ ದೃಶ್ಯ ಕಾಣಿಸುತ್ತದೆ. ಈ ಕ್ಷಣವೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.