ಮೋದಿ ವಿದೇಶ ಪ್ರವಾಸಕ್ಕೆ 180 ಕೋಟಿ ರೂ. ವೆಚ್ಚ

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2025ರಲ್ಲಿ ಅಮೆರಿಕ, ಯುಕೆ, ಫ್ರಾನ್ಸ್, ಚೀನಾ ಮತ್ತು ಜಪಾನ್ ಸೇರಿ 23 ದೇಶಗಳಿಗೆ ಭೇಟಿ ನೀಡಲು 180 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. 

2026ರಲ್ಲಿ ಜುಲೈ 6ರಿಂದ 11ರವರೆಗಿನ ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸವನ್ನೂ ಸೇರಿಸಿ ಈವರೆಗೆ ಸುಮಾರು 74.58 ಕೋಟಿ ರೂ. ವೆಚ್ಚವಾಗಿದೆ. ಸರ್ಕಾರ ನೀಡಿರುವ ಲೆಕ್ಕದ ಪ್ರಕಾರ 2025ರಲ್ಲಿ ಪ್ರಧಾನಿಯವರ ವಿವಿಧ ದೇಶಗಳ ಭೇಟಿಗೆ ಸುಮಾರು 187 ಕೋಟಿ ರೂ. ವೆಚ್ಚವಾಗಿದೆ. 

ಇದರ ಜತೆಯಲ್ಲೇ ಮೋದಿ 2025ರಲ್ಲಿ ಮಾರಿಷಸ್, ಥಾಯ್ಲೆಂಡ್, ಶ್ರೀಲಂಕಾ, ಸೈಪ್ರಸ್, ಕೆನಡಾ, ಕ್ರೊಯೇಷಿಯಾ, ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ನಮೀಬಿಯಾ, ಮಾಲ್ಡೀವ್ಸ್, ಜಪಾನ್, ಭೂತಾನ್, ದಕ್ಷಿಣ ಆಫ್ರಿಕಾ, ಜೋರ್ಡಾನ್, ಒಮನ್ ಮತ್ತು ಇಥಿಯೋಪಿಯಾ ದೇಶಗಳಿಗೆ ಭೇಟಿ ನೀಡಿದ್ದರು. ಮೋದಿ ಅವರ ವಿದೇಶ ಪ್ರವಾಸಕ್ಕಾಗಿ 2024ರಲ್ಲಿ 109 ಕೋಟಿ ರೂ., 2023ರಲ್ಲಿ 93 ಕೋಟಿ ರೂ., 2022ರಲ್ಲಿ 55.82 ಕೋಟಿ ರೂ. ಮತ್ತು 2021ರಲ್ಲಿ 36 ಕೋಟಿ ರೂ. ಖರ್ಚಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net