ಅಂದಹಾಗೆ, ಮಾಡೆಲಿಂಗ್ ಹಾಗೂ ವಿದೇಶಗಳಲ್ಲಿ ಉನ್ನತ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಯುವತಿಯರನ್ನು ಮಾನವ ಕಳ್ಳಸಾಗಣೆ ಮತ್ತು ಲೈಂಗಿಕ ಕಿರುಕುಳಕ್ಕೆ ದೂಡುತ್ತಿದ್ದ ಜಾಲದ ಭೀಕರ ಕೃತ್ಯಗಳು ಬೆಳಕಿಗೆ ಬಂದಿವೆ. ಸಂತ್ರಸ್ತ ಯುವತಿಯರನ್ನು ದುಬೈಗೆ ಕರೆದೊಯ್ದು ಅಲ್ಲಿನ ಹೋಟೆಲ್ಗಳಲ್ಲಿ ಕೂಡಿಹಾಕಿ, ಸಾಫ್ಟ್ ಡ್ರಿಂಕ್ಸ್ಗಳಲ್ಲಿ ಮಾದಕ ದ್ರವ್ಯಗಳನ್ನು ಬೆರೆಸಿ ಬಲವಂತವಾಗಿ ಕುಡಿಸಿ ಪ್ರಜ್ಞೆ ತಪ್ಪಿಸಲಾಗುತ್ತಿತ್ತು, ಆನಂತರ ಅವರನ್ನು ಅಪರಿಚಿತ ಪುರುಷರ ಮುಂದೆ ಪ್ರದರ್ಶಿಸಿ, ಅವರ ನಗ್ನ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿತ್ತು. ಬಳಿಕ ಅದೇ ವಿಡಿಯೋ-ಫೋಟೋಗಳನ್ನು ತೋರಿಸಿ ಬೆದರಿಕೆ ಹಾಕುತ್ತಾ, ಯುವತಿಯರ ಮೇಲೆ ನಿರಂತರವಾಗಿ ಕ್ರೂರ ದೌರ್ಜನ್ಯ ಎಸಗಲಾಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ಕೇರಳ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ, (ಏಜೆನ್ಸೀಸ್).