ಬೆಂಗಳೂರು: ನಿಮ್ಮ ಮೊಬೈಲ್(Mobile) ಫೋನ್ ಕಳೆದುಹೋದಾಗ ಅಥವಾ ಕಳುವಾದಾಗ ಉಂಟಾಗುವ ಆತಂಕಕ್ಕಿಂತ, ಅದರಲ್ಲಿರುವ ಬ್ಯಾಂಕಿಂಗ್ ಮಾಹಿತಿ ಮತ್ತು ಹಣದ ಸುರಕ್ಷತೆಯ ಬಗ್ಗೆ ಹೆಚ್ಚು ಭಯವಿರುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಕೇವಲ ಸಂವಹನದ ಸಾಧನವಲ್ಲ, ಅದು ನಿಮ್ಮ ಕೈಯಲ್ಲಿರುವ ಬ್ಯಾಂಕ್ ಕೂಡ ಹೌದು. ಆದಾಗ್ಯೂ, ಫೋನ್ ಕಳೆದುಕೊಂಡ ಮೊದಲ 30 ನಿಮಿಷಗಳಲ್ಲಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳ ಮಾಹಿತಿ ಇಲ್ಲಿದೆ.