ವಾಯುಯಾನ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಮಾಡೆಲ್ ಸಯಾಲಿ, ಒಂದು ವಾರದ ಹಿಂದಷ್ಟೇ ತನ್ನ ಹೆಸರನ್ನು ಆದ್ಯ ಸುರ್ವೆ ಎಂದು ಬದಲಾಯಿಸಿಕೊಂಡು, ಅದ್ಧೂರಿ ಸಮಾರಂಭದೊಂದಿಗೆ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಭಾರಿ ಸುದ್ದಿಯಾಗಿತ್ತು. ಈ ವೇಳೆ ತಮ್ಮ ಗಂಡನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಸಯಾಲಿ, ವರ್ಷಗಳ ಕಾಲ ನನಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದರು ಎಂದರು. ಹಿಂದೂ ಧರ್ಮಕ್ಕೆ ವಾಪಸ್ಸಾದ ಬೆನ್ನಲ್ಲೇ ತನ್ನ ನಾಲ್ವರು ಮಕ್ಕಳೊಂದಿಗೆ ಇದೀಗ ಸಯಾಲಿ ನಾಪತ್ತೆಯಾಗಿದ್ದಾರೆ.