ಚೀನೀ GPS ಟ್ರ್ಯಾಕರ್ ಹೊಂದಿರುವ ವಲಸೆ ಸೀಗಲ್ ಹಕ್ಕಿ ಕಾರವಾರದಲ್ಲಿ ಪತ್ತೆ: ಗೂಢಚರ್ಯೆ ಶಂಕೆ!

Chinese GPS tracker
Chinese GPS tracker
Published on
ಉತ್ತರ ಕನ್ನಡ: ಕಾರವಾರ ಕರಾವಳಿಯಲ್ಲಿ ಚೀನೀ ಸಂಸ್ಥೆಯ GPS ಟ್ರ್ಯಾಕರ್ ಹೊಂದಿರುವ ವಲಸೆ ಸೀಗಲ್ ಹಕ್ಕಿ (ಸೀಗಲ್) ಪತ್ತೆಯಾಗಿದೆ.
ಡಿಸೆಂಬರ್ 17ರಂದು(ಬುಧವಾರ) ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರವೀಂದ್ರನಾಥ ಟಾಗೋರ್ ಬೀಚ್ ಬಳಿಯ ತಿಮ್ಮಕ್ಕ ಗಾರ್ಡನ್ ಹಿಂಭಾಗದಲ್ಲಿ ಈ ಗಾಯಗೊಂಡ ವಲಸೆ ಸೀಗಲ್ ಹಕ್ಕಿಯನ್ನು ಸ್ಥಳೀಯರು ಗಮನಿಸಿದ್ದಾರೆ.
ಹಕ್ಕಿಯ ಬೆನ್ನಿನಲ್ಲಿ ಅಳವಡಿಸಿದ್ದ GPS ಟ್ರ್ಯಾಕರ್‌ನಲ್ಲಿ ಚೀನೀ ಅಕಾಡೆಮಿ ಆಫ್ ಸೈನ್ಸಸ್ನ ರಿಸರ್ಚ್ ಸೆಂಟರ್ ಫಾರ್ ಇಕೋ-ಎನ್ವಿರಾನ್‌ಮೆಂಟಲ್ ಸೈನ್ಸಸ್ ವಿಳಾಸ ಮತ್ತು ಇಮೇಲ್ ಐಡಿ ಪತ್ತೆಯಾಗಿದೆ.
ಈ ಟ್ರ್ಯಾಕರ್ ಹಕ್ಕಿಗಳ ವಲಸೆ ಮಾರ್ಗ, ಆಹಾರ ಮತ್ತು ಚಲನೆಯನ್ನು ಅಧ್ಯಯನ ಮಾಡಲು ಬಳಸುವ ವೈಜ್ಞಾನಿಕ ಸಾಧನವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಟ್ರ್ಯಾಕರ್‌ನಲ್ಲಿ ಕ್ಯಾಮೆರಾ ಇಲ್ಲ ಮತ್ತು ಇದು ಸೌರಶಕ್ತಿಯಿಂದ ಕಾರ್ಯನಿರ್ವಹಿಸುತ್ತದೆ.
ಡೇಟಾ ಪ್ರಕಾರ ಹಕ್ಕಿ ಆರ್ಕ್ಟಿಕ್ ಪ್ರದೇಶಗಳ ಮೂಲಕ 10,000 ಕಿ.ಮೀ.ಗಿಂತ ಹೆಚ್ಚು ದೂರ ಹಾರಿ ಬಂದಿದೆ.ಕಾರವಾರದಲ್ಲಿ INS ಕದಂಬ ನೌಕಾ ನೆಲೆ ಇರುವುದರಿಂದ ಆರಂಭದಲ್ಲಿ ಗೂಢಚರ್ಯೆ ಶಂಕೆ ವ್ಯಕ್ತವಾಗಿತ್ತು. ಆದರೆ ಪ್ರಾಥಮಿಕ ತನಿಖೆಯಲ್ಲಿ ಇದು ವೈಜ್ಞಾನಿಕ ಅಧ್ಯಯನಕ್ಕೆ ಸಂಬಂಧಿಸಿದ್ದು ಎಂದು ಸ್ಪಷ್ಟವಾಗಿದೆ ಮತ್ತು ಯಾವುದೇ ಗೂಢಚರ್ಯೆ ಸಾಧ್ಯತೆ ಇಲ್ಲ ಎಂದು ಪೊಲೀಸ್ ಮತ್ತು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.
ಹಕ್ಕಿಯನ್ನು ಸುರಕ್ಷಿತವಾಗಿ ಅರಣ್ಯ ಇಲಾಖೆಗೆ ಸ್ಥಳಾಂತರಿಸಲಾಗಿದೆ ಮತ್ತು ಟ್ರ್ಯಾಕರ್ ತೆಗೆದುಹಾಕಲಾಗಿದೆ. ಸಂಬಂಧಪಟ್ಟ ಚೀನೀ ಸಂಸ್ಥೆಯೊಂದಿಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನ ನಡೆಯುತ್ತಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net