24 ಗಂಟೆಗಳ ಕಾಲ ತನ್ನ ಸಾಫ್ಟ್​ವೇರ್​ಗಳ ಬಳಕೆಗೆ ಅಡಚಣೆ; ವಿಷಾದ ವ್ಯಕ್ತಪಡಿಸಿ ಕಾರಣ ಬಹಿರಂಗಪಡಿಸಿದ ಮೈಕ್ರೋಸಾಫ್ಟ್​ | Microsoft

ಸುಮಾರು 24 ಗಂಟೆಗಳ ಕಾಲ 'ಟೀಮ್ಸ್', 'ಔಟ್‌ಲುಕ್' ಮತ್ತು 'ಕೋಪೈಲಟ್' ಎಐ ಸಾಫ್ಟ್‌ವೇರ್‌ಗಳ ಬಳಕೆಗೆ ಜಾಗತಿಕವಾಗಿ ಅಡಚಣೆಗೆ ಸಂಬಂಧಿಸಿದಂತೆ ಮೈಕ್ರೋಸಾಫ್ಟ್ ಕ್ಷಮೆಯಾಚಿಸಿದೆ. ಮತ್ತು ಈ ಘಟನೆಗೆ ಸೈಬರ್ ದಾಳಿ ಕಾರಣವಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.
Microsoft ​    ​
Published on: 

Microsoft: ಸುಮಾರು 24 ಗಂಟೆಗಳ ಕಾಲ 'ಟೀಮ್ಸ್', 'ಔಟ್‌ಲುಕ್' ಮತ್ತು 'ಕೋಪೈಲಟ್' ಎಐ ಸಾಫ್ಟ್‌ವೇರ್‌ಗಳ ಬಳಕೆಗೆ ಜಾಗತಿಕವಾಗಿ ಅಡಚಣೆಗೆ ಸಂಬಂಧಿಸಿದಂತೆ ಮೈಕ್ರೋಸಾಫ್ಟ್ ಕ್ಷಮೆಯಾಚಿಸಿದೆ. ಮತ್ತು ಈ ಘಟನೆಗೆ ಸೈಬರ್ ದಾಳಿ ಕಾರಣವಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಕೃತಕ ಬುದ್ಧಿಮತ್ತೆ (AI) ಏಜೆಂಟ್‌ಗಳಿಗೆ ಸಂಬಂಧಿಸಿದ ಸಮಸ್ಯೆಗಳು ಅಥವಾ ಯಾವುದೇ ದುರುದ್ದೇಶಪೂರಿತ ಚಟುವಟಿಕೆಗಳಿಂದ ಈ ವ್ಯತ್ಯಯ ಉಂಟಾಗಿಲ್ಲ. ಬದಲಾಗಿ, ನೆಟ್‌ವರ್ಕ್ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಕ್ರಿಯೆಯಲ್ಲಿ ಎದುರಾದ ತಾಂತ್ರಿಕ ದೋಷವೇ ಇದಕ್ಕೆ ಕಾರಣ ಎಂದು ತಿಳಿಸಿದೆ.

Also Read
ಗಾಂಧಿ ಕುಟುಂಬಗಳಲ್ಲಿನ ಸಾವು, ಸೋನಿಯಾ ಗಾಂಧಿ ಗುರಿಯಾಗಿಸಿ ಪೋಸ್ಟ್: ಬಿಜೆಪಿ ಸಂಸದೆ ಕಂಗನಾ ರಣಾವತ್ ವಿರುದ್ಧ ಎಫ್​ಐಆರ್ | Kangana Ranaut
Microsoft ​    ​

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿರುವ ಕಂಪನಿ, ಈ ಘಟನೆಯಿಂದಾಗಿ ನಮ್ಮ ಗ್ರಾಹಕರು ಮತ್ತು ಪಾಲುದಾರರಿಗೆ ಉಂಟಾದ ಅಡಚಣೆಗೆ ನಾವು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ. ನಮ್ಮ ಸೇವೆಗಳ ಮೇಲೆ ಅವರು ಇಟ್ಟಿರುವ ನಂಬಿಕೆಯನ್ನು ನಾವು ಅರಿತಿದ್ದೇವೆ ಮತ್ತು ಆ ಜವಾಬ್ದಾರಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ. ನಮ್ಮ ಸೇವೆಗಳು ವ್ಯಾಪಕವಾಗಿ ಚೇತರಿಸಿಕೊಳ್ಳುತ್ತಿದ್ದು, ಸ್ಥಿರತೆ ಮರಳುತ್ತಿದೆ. ಆದಾಗ್ಯೂ, ಸೇವೆಗಳನ್ನು ಪೂರ್ಣವಾಗಿ ಪುನಃಸ್ಥಾಪಿಸಲು ಯಾವುದೇ ಕಾಲಮಿತಿಯನ್ನು ಹೊಂದಿಲ್ಲ ಎಂದು ತಿಳಿಸಿದೆ.

ಸೈಬರ್ ಅಥವಾ AI ಗೆ ಸಂಬಂಧಿಸಿಲ್ಲ

ಇದು ಸೈಬರ್ ಅಥವಾ ಕೃತಕ ಬುದ್ಧಿಮತ್ತೆ (AI) ಏಜೆಂಟ್‌ಗಳಿಗೆ ಸಂಬಂಧಿಸದ ಒಂದು ತಾಂತ್ರಿಕ ಸಮಸ್ಯೆಯಾಗಿದೆ. ನೆಟ್‌ವರ್ಕ್ ಸಾಮರ್ಥ್ಯವನ್ನು ಹೆಚ್ಚಿಸುವ ಹಿಂದಿನ ಪ್ರಕ್ರಿಯೆಯಲ್ಲಿದ್ದ ದೋಷವೊಂದು, ಇತ್ತೀಚೆಗೆ ನೆಟ್‌ವರ್ಕ್‌ನಲ್ಲಿ ಮಾಡಿದ ಬದಲಾವಣೆಯ ನಂತರ ಹೊರಹೊಮ್ಮಿದ್ದೇ ಈ ಘಟನೆಗೆ ಕಾರಣವಾಯಿತು. ನಾವು ಆ ಮೂಲ ಸಮಸ್ಯೆಯನ್ನು ಬಗೆಹರಿಸಿದ್ದೇವೆ ಮತ್ತು ಉಳಿದ ಗ್ರಾಹಕರು ಹಾಗೂ ಪ್ರದೇಶಗಳಲ್ಲಿ ಸೇವೆಯನ್ನು ಪುನಃಸ್ಥಾಪಿಸುವ ಕೆಲಸವನ್ನು ಮುಂದುವರಿಸಿದ್ದೇವೆ ಎಂದು ಹೇಳಿದೆ.

ಕಳೆದ 24 ಗಂಟೆಗಳಲ್ಲಿ ಮೈಕ್ರೋಸಾಫ್ಟ್ 365 ಹಾಗೂ ಔಟ್ಲುಕ್, ಟೀಮ್ಸ್ ಸೇರಿದಂತೆ ಹಲವು ಅಪ್ಲಿಕೇಶನ್​​ಗಳು ಸ್ತಬ್ಧಗೊಂಡಿದ್ದವು. ಇದರಿಂದಾಗಿ ಓಪನ್​ ಎಐ ಮತ್ತು ಆಂಥ್ರೋಪಿಕ್‌ನ ಸೇವೆಗೂ ಕೂಡ ಮೈಕ್ರೋಸಾಫ್ಟ್ 365 ಕನೆಕ್ಟರ್‌ ದೋಷದಿಂದಾಗಿ ಸಮಸ್ಯೆಯಾಗಿತ್ತು. ಇದರಿಂದ ಕೆಲಸ ಮಾಡಲಾಗದೆ ಉದ್ಯೋಗಿಗಳು ಪರದಾಡುವಂತಾಗಿತ್ತು. ಇದು ವಿಮಾನಯಾನ ಸೇವೆಯಲ್ಲೂ ವ್ಯತ್ಯಯ ಉಂಟು ಮಾಡಿತ್ತು (ಏಜೆನ್ಸೀಸ್).