ಪ್ರತಿಭಟನಾಕಾರರನ್ನು ಕೊಂಡೊಯ್ಯುತ್ತಿದ್ದ ಪೊಲೀಸ್​ ವ್ಯಾನ್​ ತಡೆದ ದಿಟ್ಟೆ; ಬಂಧಿತರ ರಿಲೀಸ್​ಗೆ ಕಾರಣವಾದ ರಿಯಾ ಯಾದವ್ ಯಾರು?.. CJP Protests

Mumbai Woman Blocking Police Van During CJP ProtestsMumbai Woman Blocking Police Van During CJP Protests
Mumbai Woman Blocking Police Van During CJP ProtestsMumbai Woman Blocking Police Van During CJP Protests
Published on

ಪ್ರಮುಖ ಮುಖ್ಯಾಂಶಗಳು

  • ಮುಂಬೈನಲ್ಲಿ ಪೊಲೀಸ್​ ವ್ಯಾನ್​ ತಡೆದು ನಿಲ್ಲಿಸಿದ ಯುವತಿ ರಿಯಾ ಯಾದವ್​.
  • ಮಳೆ ನಡುವೆಯೂ ದೃತಿಗೆಡದೆ ಪ್ರತಿಭಟನಾಕಾರರು ಇದ್ದ ವ್ಯಾನ್ ತಡೆದ ರಿಯಾ.
  • ರಿಯಾರ ಈ ಪಟ್ಟಿನಿಂದ ಬಂಧಿಸಿದ್ದ ವಿದ್ಯಾರ್ಥಿಗಳನ್ನು ರಿಲೀಸ್ ಮಾಡಿದ ಮುಂಬೈ ಪೊಲೀಸರು.
Mumbai Woman Blocking Police Van During CJP Protestsಮುಂಬೈನಲ್ಲಿ ಜೋರಾದ ಮಳೆ ಮಧ್ಯೆ ಹೂಡಿ ಮತ್ತು ಕ್ಯಾಪ್​ , ಟ್ರ್ಯಾಕ್ ಪ್ಯಾಂಟ್​ ಧರಿಸಿರುವ ಯುವತಿ, ಪ್ರತಿಭಟನೆಯಲ್ಲಿ ಬಂಧಿತರಾಗಿದ್ದವರನ್ನು ಹೊತ್ತೊಯ್ಯುತ್ತಿದ್ದ ಪೊಲೀಸ್ ವ್ಯಾನ್​ ಅನ್ನು ಧೈರ್ಯವಾಗಿ ತಡೆದು,  ನಿಂತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ.  
ಹೌದು,  ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ಅವರು ರಾಜೀನಾಮೆ ನೀಡಿಯೇ ತೀರಬೇಕು ಎನ್ನುವ ಕೂಗು ದೆಹಲಿಯಲ್ಲಿ ಮಾತ್ರವಲ್ಲ ಮುಂಬೈನಲ್ಲೂ ಗಟ್ಟಿಯಾಗಿ ಕೇಳುತ್ತಿದೆ. ವಿದ್ಯಾರ್ಥಿಗಳ ಈ ನ್ಯಾಯಯುತ ಹೋರಾಟಕ್ಕೆ ಬಾಲಿವುಡ್​, ಸ್ಯಾಂಡಲ್​ವುಡ್​​ ನಟ ಹಾಗೂ ನಟಿಯರು, ರಾಜಕೀಯ ನಾಯಕರು, ಸಾಹಿತಿಗಳು, ಗಾಯಕರು  ಬೆಂಬಲ ನೀಡುತ್ತಿದ್ದಾರೆ. 
ಧೈರ್ಯವಂತೆ ರಿಯಾ 
ಹೌದು ರಿಯಾ ಯಾದವ್​ ಎನ್ನುವ ಹೆಸರಿನ ಯುವತಿ ದಾದರ್‌ನ ಶಿವಾಜಿ ಪಾರ್ಕ್ ಬಳಿ ಧೈರ್ಯವಾಗಿ ಪೊಲೀಸ್​​ ವ್ಯಾನ್ ಮುಂದೆ ನಿಂತು ಅದನ್ನು ಚಲಿಸದಂತೆ ತಡೆದರು. ಈ ವೇಳೆ ಅಲ್ಲಿದ್ದ ಜನರು ಅವರ ಬೆಂಬಲಕ್ಕೆ ನಿಂತು ಘೋಷಣೆಗಳನ್ನು ಕೂಗಿದರು.  ಅವರ ಈ ನಡೆಯಿಂದಾಗಿ  ಬಂಧಿತರಾಗಿದ್ದ ಪ್ರತಿಭಟನಾಕಾರರು ಬಿಡುಗಡೆಯಾಗಲು ಸಾಧ್ಯವಾಯಿತು.

ಯಾರು ಈ ರಿಯಾ ಯಾದವ್​​?

ಪೊಲೀಸರ ವ್ಯಾನ್​ ತಡೆದು ಧೈರ್ಯ ಪ್ರದರ್ಶಿಸಿದ ಈ ಹುಡುಗಿ ಯಾರೆಂದು ಇಂಟರ್ನೆಟ್​​ನಲ್ಲಿ ವ್ಯಾಪಕ ಹುಡುಕಾಟ ನಡೆಸಿದಾಗ ಈಕೆ ನಟಿ ಹಾಗೂ ಮಾಡೆಲ್​ ಜೊತೆಗೆ ಉದ್ಯಮಿ ಎನ್ನುವುದು ತಿಳಿದುಬಂದಿದೆ. ಈಕೆಗೆ ಇನ್​ಸ್ಟಾಗ್ರಾಮ್​ನಲ್ಲಿ  1 ಲಕ್ಷ ಫಾಲೋವರ್ಸ್​ ಇದ್ದಾರೆ.  'ದಿಲ್‌ಬಾರಾ' ಎಂಬ ವೀಡಿಯೋ ಹಾಡಿನಲ್ಲಿ ನಟಿಸಿದ್ದಾರೆ. ಅಲ್ಲದೇ 'ರಿಯಾಸತ್' ಎನ್ನುವ ಬ್ರಾಂಡ್​ನಡಿ ಉಡುಪುಗಳನ್ನು ವಿನ್ಯಾಸಗೊಳಿಸುತ್ತಾರೆ ಎನ್ನುವುದು ಬೆಳಕಿಗೆ ಬಂದಿದೆ. 
ರಿಯಾ ಹೇಳಿದ್ದೇನು? ಪೊಲೀಸರು ತಮ್ಮ ಜವಾಬ್ದಾರಿಯನ್ನು  ನ್ಯಾಯಯುತವಾಗಿ ನಿರ್ವಹಿಸುತ್ತಿಲ್ಲ. ಅವರ ಕಾರ್ಯವನ್ನು ಸರಿಯಾದ ರೀತಿಯಲ್ಲಿ ಪೂರೈಸದೇ ಹೋದರೆ ನಾವು ನಮ್ಮದೇ ಆದ ರೀತಿಯಲ್ಲಿ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ.  ನಾನು ವಿದ್ಯಾರ್ಥಿಯಲ್ಲದಿದ್ದರೂ ಅವರ ಪರ ನಿಲ್ಲುತ್ತೇನೆ ಎಂದು ಹೇಳಿದ್ದಾರೆ

ನೆಟ್ಟಿಗರು ಏನಂದ್ರು?

ಅಂಕಿತ್​ ಮಯಾಂಕ್​ ಎಂಬುವವರು ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದು ಮುಂಬೈ ಪೊಲೀಸರು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕೊಂಡೊಯ್ಯುವಾಗ ನಿರ್ಭೀತ ಮಹಿಳೆ ವ್ಯಾನ್​ ತಡೆದು ನಿಲ್ಲಿಸಿದಳು. ಹಿಂದೆ ಸರಿದೆ ಇಲ್ಲ. ನಂತರ ವಿಧಿ ಇಲ್ಲದೆ ಪೊಲೀಸರು ವಿದ್ಯಾರ್ಥಿಗಳನ್ನು ರಿಲೀಸ್​ ಮಾಡಬೇಕಾಯಿತು, ಎಂತಹ ಧೈರ್ಯಶಾಲಿ ಮಹಿಳೆ ಎಂದು ಬರೆದುಕೊಮಡಿದ್ದಾರೆ. 

ಹಾಸ್ಯನಟ ರೋಹನ್ ಜೋಶಿ ಪ್ರಶಂಸೆ

ರಿಯಾ ಯಾದವ್​ ಅವರ ಈ  ದಿಟ್ಟತನಕ್ಕೆ ಫಿದಾಆದ ಮುಂಬೈ ಮೂಲದ ಕಾಮಿಡಿ ನಟ  ರೋಹನ್ ಜೋಶಿ  ತಮ್ಮ ಪೋಸ್ಟರ್​ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಮುಂಬೈನ ಯುವಜನತೆ ಶಾಂತಿಯುತವಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ದೌರ್ಜನ್ಯ ಮತ್ತು ಬಂಧನಗಳ ನಡುವೆಯೂ ಅವರು ಘನತೆಯಿಂದ ಹೋರಾಡಿದ್ದಾರೆ.  ಪ್ರತಿಭಟನೆ ಎಂದರೆ ಪ್ರಜಾಪ್ರಭುತ್ವದ ಅಸ್ಥಿರತೆಯಲ್ಲ. ಸೆಲೆಬ್ರಿಟಿಗಳನ್ನು ಬೆಂಬಲಕ್ಕೆ ಕರೆಯುವುದನ್ನು ನಿಲ್ಲಿಸಿ, ಇಂದಿನ ಯುವಶಕ್ತಿಗೆ ಯಾರ ಬೆಂಬಲವೂ ಅಗತ್ಯವಿಲ್ಲ. ಜೈ ಹಿಂದ್" ಎಂದು ಬರೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net