ತಾರ್ಕಿಕವಾಗಿ ನೋಡಿದರೆ- ನೀವು ಮುಂಜಾನೆ ಹಾಸಿಗೆಯಿಂದ ಏಳುವುದೂ ಒಂದು ದೊಡ್ಡ ಸಾಧನೆಯಂತೆ ಭಾಸವಾಗುತ್ತದೆ. ಅದಾದ ಮೇಲೆ ನೀವು ನಿಮ್ಮ ಹಲ್ಲುಗಳನ್ನು ಉಜ್ಜಬೇಕು, ತಿನ್ನಬೇಕು, ಕೆಲಸ ಮಾಡಬೇಕು, ತಿನ್ನಬೇಕು, ಕೆಲಸ ಮಾಡಬೇಕು, ತಿನ್ನಬೇಕು, ಮಲಗಬೇಕು; ಮರುದಿನ ಮತ್ತದೇ ಪುನರಾವರ್ತನೆ. ಜೀವನಪರ್ಯಂತ ನೀವು ಪದೇಪದೆ ಇದನ್ನೇ ಮಾಡುತ್ತಿರಬೇಕು. ರ್ತಾಕವಾಗಿ ಯೋಚಿಸಿದಲ್ಲಿ ಇದು ನಿಮಗೆ ಉಪಯುಕ್ತವೆಂದು ತೋರುತ್ತದೆಯೇ? ಖಂಡಿತವಾಗಿಯೂ ಇಲ್ಲ, ಅಲ್ಲವೇ? ನೀವು ನಿಮ್ಮ ಜೀವನದ ಅನುಭವವನ್ನು ಅವಲೋಕಿಸಿ ನೋಡಿದಾಗ, ನೀವು ನೋಡಿರಬಹುದಾದ ಸೂರ್ಯೋದಯ ನಿಮಗೆ ಅಮೂಲ್ಯವಾದದ್ದಾಗಿರುತ್ತದೆ. ಆಕಾಶದಲ್ಲಿ ಹಕ್ಕಿಗಳು ಹಾರಾಡುವುದನ್ನು ನೋಡಿದ ಕ್ಷಣ, ನಿಮ್ಮ ಉದ್ಯಾನದಲ್ಲಿ ಹೂಗಳು ಅರಳುವುದನ್ನು ನೋಡಿದ ಕ್ಷಣ ಅಥವಾ ನಿಮ್ಮ ಮಗುವಿನ ಮುಖವನ್ನು ನೋಡಿದ ಕ್ಷಣಗಳೆಲ್ಲವೂ ಅಮೂಲ್ಯ ಹಾಗೂ ಉಪಯುಕ್ತವಾಗಿ ಕಾಣಬಹುದು. ಆದರೆ ನೀವಿದನ್ನು ರ್ತಾಕವಾಗಿ ನೋಡಿದರೆ, ಅತಿಯಾದ ತರ್ಕದ ಕ್ಷಣಗಳು ಆತ್ಮಹತ್ಯೆಯ ಕ್ಷಣಗಳಾಗಿ ತೋರುತ್ತವೆ.