ಕ್ರೀಡಾಪಟುಗಳ ಪ್ರದರ್ಶನವನ್ನು ಕೇವಲ ಪದಕಗಳ ಸಂಖ್ಯೆಯನ್ನು ಆಧಾರಿಸಿ ನಿರ್ಣಯಿಸುವುದು ಸರಿಯಲ್ಲ. ಈ ಬಾರಿ, ಭಾರತದ ಚಾಂಪಿಯನ್ಗಳು ಸಂದರ್ಭಕ್ಕೆ ತಕ್ಕಂತೆ ಆಡಿದ್ದಾರೆ ಮತ್ತು ಕಡಿಮೆ ಅವಕಾಶಗಳಲ್ಲಿ ಅಸಾಧಾರಣವಾಗಿ ಅಮೋಘ ಪ್ರದರ್ಶನವನ್ನೇ ನೀಡಿ, ದೇಶದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಇದೇ ನಾಲ್ಕು ವರ್ಷಗಳ ಹಿಂದೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ 19 ಕ್ರೀಡಾಕೂಟಕ್ಕೆ ಹೋಲಿಸಿದರೆ ಈ ಬಾರಿ, ಹಣಕಾಸಿನ ಅಡಚಣೆಯಿಂದಾಗಿ, ಕೇವಲ 10 ಕ್ರೀಡೆಗಳಿಗೆ ಮಾತ್ರ ಕಾಮನ್ವೆಲ್ತ್ ಗೇಮ್ಸ್ ಸೀಮಿತವಾಗಿತ್ತು ಎಂಬುದು ಗಮನಾರ್ಹ.