ನವದೆಹಲಿ: ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇದೊಂದು ಅಭೂತಪೂರ್ವ ಸಂದರ್ಭ. 2014ರ ಮೇ 26 ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ನರೇಂದ್ರ ಮೋದಿ(Longest Serving PM) ಅವರು, 2026ರ ಜೂನ್ 10ಕ್ಕೆ ಭರ್ತಿ 4,399 ಸತತ ದಿನಗಳನ್ನು ಕಚೇರಿಯಲ್ಲಿ ಪೂರೈಸಲಿದ್ದಾರೆ. ಆ ಮೂಲಕ ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ (ಮೇ 13, 1952) ಅಧಿಕಾರ ವಹಿಸಿಕೊಂಡು, 1964 ಮೇ 27 ರವರೆಗೆ ಸತತ 4,398 ದಿನಗಳ ಕಾಲ ದೇಶ ಮುನ್ನಡೆಸಿದ್ದ ನೆಹರೂ ಅವರ ಹೆಸರಲ್ಲಿದ್ದ ಆರು ದಶಕಗಳ ಹಳೆಯ ದಾಖಲೆ ಇತಿಹಾಸದ ಪುಟ ಸೇರಲಿದೆ.