ವಯನಾಡಿನ ಮೇಪ್ಪಾಡಿ ಸಮೀಪ ಭೂಕುಸಿತ; ಇಬ್ಬರು ಮೃತ, ಏಳು ಮಂದಿ ನಾಪತ್ತೆ..Kerala

Massive Landslide In Kerala Wayanad
Massive Landslide In Kerala Wayanad
Published on

ಪ್ರಮುಖ ಮುಖ್ಯಾಂಶಗಳು

  • ವಯನಾಡಿನ ಕಲ್ಲಾಡಿ ಸುರಂಗ ಕಾಮಗಾರಿ ಪ್ರದೇಶದಲ್ಲಿ ಭೂಕುಸಿತ
  • 5 ಜನರಿಗೆ ಗಾಯ, ಆಸ್ಪತ್ರೆಗೆ ದಾಖಲಿಸಲಾಗಿದೆ
  • ಕಳೆದ 24 ಗಂಟೆಗಳಲ್ಲಿ ಈ ಪ್ರದೇಶದಲ್ಲಿ 265 ಮಿಮೀ ಮಳೆಯಾಗಿದೆ ಎಂದ KSDMA
ತಿರುವನಂತಪುರಂ:

ಏಳು ಮಂದಿಗಾಗಿ ಹುಡುಕಾಟ

ವಯನಾಡ್ ಮತ್ತು ಮಲಪ್ಪುರಂ ಜಿಲ್ಲೆಗಳನ್ನು ಸಂಪರ್ಕಿಸುವ ಸುರಂಗ ಮಾರ್ಗ ಯೋಜನೆಯ ಕಾಮಗಾರಿ ನಡೆಯುತ್ತಿದ್ದ ಮೀನಾಕ್ಷಿ ಸೇತುವೆಯ ಸಮೀಪ ಈ ಘಟನೆ ಸಂಭವಿಸಿದೆ. ಕಲ್ಪೆಟ್ಟಾದಿಂದ ಬಂದಿರುವ ಅಗ್ನಿ ಶಾಮಕ ದಳವು ಏಳು ಮಂದಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ
ಕಾರ್ಮಿಕರಿದ್ದ ಮನೆ ಮೇಲೆ ಕುಸಿತ
ವಯನಾಡು ಜಿಲ್ಲೆಯಲ್ಲಿ ಕೆಎಸ್​​ಡಿಎಂಎ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಈ ಪ್ರದೇಶದಲ್ಲಿ 265 ಮಿಮೀ ಮಳೆಯಾಗಿದೆ. ಈ ಕಾರಣದಿಂದ ಗುಡ್ಡ ಕುಸದಿದೆ ಎನ್ನಲಾಗಿದೆ. ಇನ್ನು ಸುರಂಗ ಮಾರ್ಗದ ಕಾಮಗಾರಿಗಾಗಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತಂಗಿದ್ದ ಜಾಗದ ಮೇಲೆಯೇ ಮಣ್ಣು ಮತ್ತು ಕಲ್ಲುಗಳ ರಾಶಿ ಬಿದ್ದಿದೆ. ಐವರನ್ನು ರಕ್ಷಿಸಲಾಗಿದೆ. ಸಣ್ಣಪುಟ್ಟ ಗಾಯವಾಗಿರುವ ಕಾರಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

ರಕ್ಷಣಾ ಕಾರ್ಯ ಮುಂದುವರಿಕೆ

ಘಟನಾ ಸ್ಥಳದಲ್ಲಿ ವಯನಾಡ್ ಜಿಲ್ಲಾಡಳಿತ ಮತ್ತು ರಾಜ್ಯ ಸಚಿವ ಟಿ. ಸಿದ್ದಿಕ್ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು, ರಾಷ್ಟ್ರೀಯ ವಿಪತ್ತು ಪ್ರಾಧಿಕಾರ(ಎನ್​ಡಿಆರ್​ಎಫ್​) ಕಾರ್ಯಾಚರಣೆ ಮುಂದುವರೆಸಿದೆ.

ಇಬ್ಬರು ಸಾವು, ಏಳು ಮಂದಿ ನಾಪತ್ತೆ

ಭೂಕುಸಿತದಿಂದಾಗಿ ಇಬ್ಬರು ಸಾವನ್ನಪ್ಪಿದ್ದು, ಆರು ಮಂದಿಗೆ ಗಾಯವಾಗಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದೆ. ಘಟನಾ ಸ್ಥಳದಲ್ಲಿದ್ದ ಏಳು ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಯಾರು ಏನಂದ್ರು?

ಭಾರಿ ಮಳೆಗೆ ನೈಸರ್ಗಿಕವಾಗಿ ಭೂ ಕುಸಿತವಾಗಿದ್ದಲ್ಲ. ಇದು ದೋಷಪೂರಿತ ಕಾರ್ಯಾಚರಣೆಯಿಂದವಾಗಿದ್ದು ಘಟನೆಯಿಂದ ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಘಟನಾ ಸ್ಥಳದಲ್ಲಿರುವವರಿಗಾಗಿ ನಾವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸುತ್ತೇವೆ. ಸ್ಥಳದಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆಯ ಬಗ್ಗೆ ಜಿಲ್ಲಾಧಿಕಾರಿ ಕೊಂಕಣ ರೈಲ್ವೆಗೆ ಲಿಖಿತವಾಗಿ ಮಾಹಿತಿ ನೀಡಿದ್ದರು. ಆದರೂ ಕಾಮಗಾರಿ ಮುಂದುವರೆಸಿದ್ದೇ ಘಟನೆಗೆ ಕಾರಣ ಎಂದು ವಯನಾಡ್ ಜಿಲ್ಲಾಡಳಿತ ಮತ್ತು ರಾಜ್ಯ ಸಚಿವ ಟಿ. ಸಿದ್ದಿಕ್ ಹೇಳಿದರು.

2024ರಲ್ಲೂ ಸಂಭವಿಸಿತ್ತು ಭೂ ಕುಸಿತ
2024 ಜುಲೈ 30ರಂದು ವಯನಾಡಿನ ಮುಂಡಕ್ಕೈ, ಚೂರಲ್ಮಲಾ ಮತ್ತಿತರ ಪ್ರದೇಶದಲ್ಲಿ ಭಾರಿ ಮಳೆಗೆ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿತ್ತು. ಸುಮಾರು 250ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಎರಡು ಗ್ರಾಮ ಸಂಪೂರ್ಣ ನಾಶವಾಗಿತ್ತು,( ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net