ಘಟನೆಯ ಸ್ವರೂಪ ಮತ್ತು ಹಾನಿಯ ಪ್ರಮಾಣವನ್ನು ಗಮನಿಸಿದರೆ, ಸಾವು ನೋವು ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಬಿಜೆಪಿ ನಾಯಕರ ಭೇಟಿಗೆ ಮುಂಚಿತವಾಗಿ, ಬುಧವಾರ (ಜ.28) ಮಧ್ಯರಾತ್ರಿಯಿಂದ ಪ್ರದೇಶದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ.