ಕೋಲ್ಕತ್ತಾದಲ್ಲಿ ಪ್ರಬಲ ಭೂಕಂಪ: 5.4 ತೀವ್ರತೆಯ ಕಂಪನಕ್ಕೆ ಬೆಚ್ಚಿಬಿದ್ದ ಮಹಾನಗರ! Massive Earthquake

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Published on
ಕೋಲ್ಕತ್ತಾ: ನಗರದಲ್ಲಿ ಇಂದು ಮಧ್ಯಾಹ್ನ 1:22 ರ ಸುಮಾರಿಗೆ 5.4 ತೀವ್ರತೆಯ ಪ್ರಬಲ ಭೂಕಂಪ (Massive Earthquake) ಸಂಭವಿಸಿದ್ದು, ರಾಜ್ಯದ ಇತರ ಭಾಗಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ಏನು?

ಶುಕ್ರವಾರ ಮಧ್ಯಾಹ್ನ ಸುಮಾರು 1:22 ಗಂಟೆಯ ವೇಳೆಗೆ ಕೋಲ್ಕತ್ತಾ ನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸುಮಾರು 5-8 ಸೆಕೆಂಡುಗಳ ಭೂಕಂಪ ಸಂಭವಿಸಿದೆ. ನಗರದ ಎತ್ತರದ ಕಟ್ಟಡಗಳು, ಕಚೇರಿ ಸಂಕೀರ್ಣಗಳು ಮತ್ತು ವಸತಿ ಸಮುಚ್ಚಯಗಳಲ್ಲಿ ಕಂಪನದ ತೀವ್ರತೆ ಹೆಚ್ಚಾಗಿ ಕಂಡುಬಂದಿದೆ. ಈ ಸಮಯದಲ್ಲಿ ಮನೆಯಲ್ಲಿದ್ದ ಪೀಠೋಪಕರಣಗಳು ಅಲುಗಾಡಲು ಪ್ರಾರಂಭಿಸಿದಾಗ ಜನರು ಗಾಬರಿಯಿಂದ ಮನೆಯಿಂದ ಹೊರ ಬಂದಿದ್ದಾರೆ ಎಂದು ವರದಿಯಾಗಿದೆ.
ತೀವ್ರತೆ
ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ (NCS) ವರದಿಯ ಪ್ರಕಾರ, ಭೂಕಂಪದ ಕೇಂದ್ರಬಿಂದುವು ಬಾಂಗ್ಲಾದೇಶದ ಭೂಪ್ರದೇಶದಲ್ಲಿದ್ದು, ಸುಮಾರು 30 ರಿಂದ 35 ಕಿಮೀ ಆಳದವರೆಗೆ ಕಂಪಿಸಿದೆ. ಯಾವುದೇ ರೀತಿಯಲ್ಲೂ ಹಾನಿ, ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ತಿಂಗಳಲ್ಲಿ ಇದು ಎರಡನೇ ಬಾರಿ ಘಟನೆ ಸಂಭವಿಸಿದ್ದು, ಈ ಹಿಂದೆ (ಫೆ.03) ರಂದು ನಗರದಲ್ಲಿ ಸಣ್ಣ ಮಟ್ಟದಲ್ಲಿ ಭೂಕಂಪ ಉಂಟಾಗಿದೆ. ಈ ವೇಳೆ ಕೋಲ್ಕತ್ತಾ ಮತ್ತು ಪಶ್ಚಿಮ ಬಂಗಾಳದ ಇತರ ಭಾಗಗಳಲ್ಲಿ ಕಂಪನದ ಅನುಭವವಾಯಿತು. ಇದರ ಕೇಂದ್ರಬಿಂದು ಮ್ಯಾನ್ಮಾರ್‌ನಲ್ಲಿದೆ.
ನಾಗರಿಕರು ಹೇಗೆ ಪ್ರತಿಕ್ರಿಯಿಸಿದ್ದಾರೆ?
ಈ ಘಟನೆ ಸಂಭವಿಸಿದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಅಲ್ಲಿನ ನಿವಾಸಿಗಳು ಪ್ರತಿಕ್ರಿಯಿಸಿದ್ದು, ಸೋಫಾದಲ್ಲಿ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಕಂಪನದ ಅನುಭವವಾಯಿತು. ನಾವು ಮನೆಯಿಂದ ಹೊರಗೆ ಓಡಿಹೋದೆವು. ಸೋಫಾ ಮತ್ತು ಫ್ಯಾನ್ ಅಲುಗಾಡಲು ಪ್ರಾರಂಭಿಸಿದವು. ಮೇಜಿನ ಮೇಲೆ ಇಟ್ಟಿದ್ದ ಬಾಟಲಿ ಕೆಳಗೆ ಬಿದ್ದಿತು. ನಾವೆಲ್ಲರೂ ಕೆಳಗೆ ಧಾವಿಸಿದೆವು, ಎಂದು ಅವರು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net