

ಪ್ರಮುಖ ಮುಖ್ಯಾಂಶಗಳು
ಉಗ್ರರ ಬಳಿಯಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಹ್ಯಾಂಡ್ ಗ್ರೆನೇಡ್‌ಗಳು ಹಾಗೂ ರಾಷ್ಟ್ರವಿರೋಧಿ ಪೋಸ್ಟರ್‌ಗಳನ್ನು ಪಡೆಗಳು ವಶಪಡಿಸಿಕೊಂಡಿವೆ.
ಆದರೆ, ಒಳಗೊಳಗೆ ಆನ್‌ಲೈನ್ ಮೂಲಕ ಬ್ರೇನ್ ವಾಶ್‌ಗೆ ಒಳಗಾಗಿ, ಉಗ್ರರ ಸಂಘಟನೆಗಳ ಜೊತೆ ಕೈಜೋಡಿಸಿರುತ್ತಾರೆ. ಅಪರಾಧ ಹಿನ್ನೆಲೆ ಇಲ್ಲದ ಕಾರಣ ಇವರನ್ನು ಪತ್ತೆ ಹಚ್ಚುವುದು ಪೊಲೀಸರಿಗೂ ಸವಾಲಿನ ಕೆಲಸವಾಗಿದೆ.
ಮೋಟಾರ್‌ಸೈಕಲ್‌ನಲ್ಲಿ ತೆರಳುತ್ತಿದ್ದ ಜುನೈದ್ ಮುಜಾಫರ್ ದಾರ್ ಸೇರಿದಂತೆ ಮೂವರು ಉಗ್ರರ ಸಹಚರರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇವರ ಬಳಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸಂಬಂಧಿಸಿದ ಆಕ್ಷೇಪಾರ್ಹ ಪೋಸ್ಟರ್‌ಗಳು ಸಿಕ್ಕಿವೆ. ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮೂವರನ್ನು ಬಂಧಿಸಿ, ಎಕೆ-47 ಮ್ಯಾಗಜೀನ್‌ಗಳು ಮತ್ತು ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.