ತವರಿಗೆ ತೆರಳಿದ್ದ ಪತ್ನಿ; ಪ್ರೇಯಸಿಯನ್ನು ಕೊಂದು, ತುಂಡರಿಸಿ ಫ್ರಿಜ್​​ನಲ್ಲಿಟ್ಟಿದ್ದ ನೌಕಾಪಡೆ ಸಿಬ್ಬಂದಿ..Navy Staffer Kills Lover

Navy Staffer Kills Lover
Navy Staffer Kills Lover
Published on
ವಿಶಾಖ ಪಟ್ಟಣಂ: ದೆಹಲಿಯ ಶ್ರದ್ಧಾ ವಾಕರ್​ ಕೊಲೆ ಪ್ರಕರಣವನ್ನೇ ನೆನಪಿಸುವಂತಹ ಘಟನೆಯೊಂದು ಆಂಧ್ರದಲ್ಲಿ ನಡೆದಿದೆ. ನೌಕಾಪಡೆಯ ಸಿಬ್ಬಂದಿಯೊಬ್ಬ (Navy technician) ತನ್ನ ಪ್ರೇಯಸಿಯನ್ನು ಕೊಂದು, ತುಂಡು ತುಂಡಾಗಿ ಕತ್ತರಿಸಿ, ಫ್ರಿಡ್ಜ್​ನಲ್ಲಿಟ್ಟು ಪೊಲೀಸರಿಗೆ ಶರಣಾದ ಪ್ರಕರಣ ಬೆಳಕಿಗೆ ಬಂದಿದೆ.
ವಿಜಯನಗರಂ ಜಿಲ್ಲೆಯ ನಿವಾಸಿ ರವೀಂದ್ರ(35) ಬಂಧಿತ ಆರೋಪಿ. ಈತನನು ವಿಶಾಖಪಟ್ಟಣದ ನೌಕಾಪೊಡೆಯಲ್ಲಿ ತಂತ್ರಜ್ಞನ ಹುದ್ದೆಯಲ್ಲಿದ್ದ. ಈಗಾಗಲೇ ಈತನಿಗೆ ಮದುವೆಯಾಗಿತ್ತು. ಆದರೆ, ಈ ಮಧ್ಯೆ ಮೌನಿಕಾ (29) ಎಂಬಾಕೆಯೊಂದಿಕೆ ಅಕ್ರಮ ಸಂಬಂಧವನ್ನು ಹೊಂದಿದ್ದ. ರವೀಂದ್ರನ ಪತ್ನಿ ಕೆಲ ವಾರಗಳ ಹಿಂದೆ ತವರಿಗೆ ತೆರಳಿದ್ದರು. ಆತ ಒಬ್ಬನೇ ಮನೆಯಲ್ಲಿ ತಂಗಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಚಾಕುವಿನಿಂದ ಇರಿದು ಕೊಲೆ

ಗಾಜುವಾಕ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್‌ವಿ ನಗರದಲ್ಲಿ ರವೀಂದ್ರ ದಂಪತಿ ಮನೆ ಮಾಡಿಕೊಂಡಿದ್ದರು. ಮಾರ್ಚ್​​29 (ಭಾನುವಾರ) ರವೀಂದ್ರ ಅವರು ಮೌನಿಕಾಳನ್ನು ಕರೆದಿದ್ದ. ಹೀಗಾಗಿ ಆಕೆ ಆತನ ಮನೆಗೆ ತೆರಳಿದ್ದರು. ಹಲವು ಗಂಟೆಗಳ ಜೊತೆಗಿದ್ದ ಅವರು ಏಕಾಂತದಲ್ಲಿದ್ದರು ಎನ್ನಲಾಗಿದೆ. ಸಂಜೆಯಾಗುತ್ತಲೇ ಇಬ್ಬರ ಮಧ್ಯೆ ಶೀತಲ ಸಮರ ನಡೆದಿದೆ. ಜಗಳವೂ ವಿಕೋಪಕ್ಕೆ ತಿರುಗಿ, ಸಿಟ್ಟಾದ ಆತ ಆಕೆಗೆ ಚಾಕುವಿನಿಂದ ಇರಿದು ಕೊಲೆ(Navy Staffer Kills Lover) ಮಾಡಿದ್ದಾನೆ ಎನ್ನಲಾಗಿದೆ.

ದೇಹ ತುಂಡರಿಸಿ ಫ್ರಿಡ್ಜ್​ನಲ್ಲಿಟ್ಟಿದ್ದ

ಕೊಲೆ ಮಾಡಿದ ನಂತರ ಸಾಕ್ಷಿ ನಾಶ ಪಡಿಸಲು ಯತ್ನಿಸಿದ ಆತ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಕೆಲವು ಭಾಗಗಳನ್ನು ಮನೆಯಲ್ಲಿದ್ದ ಫ್ರಿಡ್ಜ್‌ನಲ್ಲಿ ಬಚ್ಚಿಟ್ಟಿದ್ದ. ಉಳಿದ ಭಾಗಗಳನ್ನು ಚೀಲದಲ್ಲಿ ತುಂಬಿಕೊಂಡು ಜನರಿಲ್ಲದ ನಿರ್ಜನ ಪ್ರದೇಶದಲ್ಲಿ ಎಸೆಯಲು ಮುಂದಾಗಿದ್ದ. ಕೊನೆಗೆ ಪಶ್ಚಾತ್ತಾಪ ಕಾಡಿತ್ತೋ ಅಥವಾ ಸಿಕ್ಕಿ ಬೀಳುವ ಆತಂಕದಿಂದಲೋ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ. ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಇನ್ನು ಸಿಗದ ತಲೆ

ಆರೋಪಿ ರವೀಂಧ್ರ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆತನ ಮನೆಗೆ ತೆರಳಿ ಫ್ರಿಡ್ಜ್​ ಪರಿಶೀಳಿಸಿದರು. ಅಲ್ಲಿ ಆಕೆಯ ದೇಹದ ಉಳಿದ ಭಾಗ ಪತ್ತೆಯಾಗಿದೆ. ಆದರೆ, ಮೌನಿಕಾಳ ತಲೆ ಪತ್ತೆಯಾಗಿಲ್ಲ. ಅದನ್ನು ಬೇರೆ ಕಡೆ ಎಸೆದಿರುವ ಶಂಕೆ ವ್ಯಕ್ತವಾಗಿದ್ದು, ಹುಡುಕಾಟಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net