ವಿವಾಹಿತನ ಲಿವ್-ಇನ್ ಬದುಕಿಗೆ ಕಾನೂನಿನ ಮಾನ್ಯತೆ!..ವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು Allahabad High Court

Allahabad High Court (ಸಾಂದರ್ಭಿಕ ಚಿತ್ರ)
Allahabad High Court (ಸಾಂದರ್ಭಿಕ ಚಿತ್ರ)
Published on

ಪ್ರಮುಖ ಮುಖ್ಯಾಂಶಗಳು

  • ವಿವಾಹಿತ ಪುರುಷನು ಮತ್ತೊಬ್ಬ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿ ತೊಡಗಿಸಿಕೊಳ್ಳುವುದು ಕಾನೂನಿನಡಿಯಲ್ಲಿ ಅಪರಾಧವಲ್ಲ
  • ಸಂವಿಧಾನದ 21ನೇ ವಿಧಿಯಡಿ ನೀಡಲಾದ ವೈಯಕ್ತಿಕ ಜೀವಿಸುವ ಹಕ್ಕು ಸಾಮಾಜಿಕ ಕಟ್ಟುಪಾಡುಗಳಿಗಿಂತ ಮಿಗಿಲಾದದ್ದು
  • ಸಮಾಜವು ಯಾವುದನ್ನಾದರೂ 'ಅನೈತಿಕ' ಎಂದು ಕರೆದ ತಕ್ಷಣ ಅದು ಅಪರಾಧವಾಗುವುದಿಲ್ಲ
  • ಕಾನೂನಿನ ಪುಸ್ತಕದಲ್ಲಿ ಅದು ಅಪರಾಧ ಎಂದು ದಾಖಲಾಗದ ಹೊರತು ನ್ಯಾಯಾಲಯವು ಶಿಕ್ಷಿಸಲು ಸಾಧ್ಯವಿಲ್ಲ
ಉತ್ತರ ಪ್ರದೇಶ: ವಿವಾಹಿತ ಪುರುಷನು ಮತ್ತೊಬ್ಬ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿ ತೊಡಗಿಸಿಕೊಳ್ಳುವುದು ಕಾನೂನಿನಡಿಯಲ್ಲಿ ಅಪರಾಧವಲ್ಲ ಎಂದು (Allahabad High Court) ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಈ ಮೂಲಕ ಸಂವಿಧಾನದ 21ನೇ ವಿಧಿಯಡಿ ನೀಡಲಾದ ವೈಯಕ್ತಿಕ ಜೀವಿಸುವ ಹಕ್ಕು ಸಾಮಾಜಿಕ ಕಟ್ಟುಪಾಡುಗಳಿಗಿಂತ ಮಿಗಿಲಾದದ್ದು ಎಂದು ಹೈಕೋರ್ಟ್ ಎತ್ತಿ ಹಿಡಿದಿದೆ.

ಘಟನೆ ಹಿನ್ನಲೆ

ಈಗಾಗಲೇ ವಿವಾಹವಾಗಿದ್ದ ಪುರುಷನೊಬ್ಬನು ಮತ್ತೊಂದು ಯುವತಿಯೊಂದಿಗೆ ವಾಸಿಸುತ್ತಿದ್ದನು. ಈ ವಿಚಾರವಾಗಿ ಮಹಿಳೆಯ ಕುಟುಂಬದಿಂದ ಬೆದರಿಕೆ ಬಂದ ಹಿನ್ನಲೆ ಲಿವ್​-ಇನ್​​ ದಂಪತಿ ರಕ್ಷಣೆ ಕೋರಿ ಸಲ್ಲಿಸಿದ ಅರ್ಜಿಯನ್ನು ಸಲ್ಲಿಸಿದರು. ಈ ಪ್ರಕರಣವನ್ನು ಆಲಿಸಿದ ನ್ಯಾಯಾಲಯವು ವಿವಾಹಿತ ಪುರುಷನು ಪರಸ್ಪರ ಒಪ್ಪಿಗೆಯಿಂದ ಸಂಬಂಧ ಹೊಂದುವುದು ಅಪರಾಧವಲ್ಲ ಎಂದು ಹೇಳಿಕೆ ನೀಡಿದೆ.
ವಿವಾಹಿತ ಪುರುಷನು ವಯಸ್ಕ ವ್ಯಕ್ತಿಯೊಂದಿಗೆ ಲಿವ್-ಇನ್​ ಸಂಬಂಧದಲ್ಲಿ ಒಟ್ಟಿಗೆ ವಾಸಿಸಲು ನಿರ್ಧರಿಸಿದಾಗ, ಅವರ ಹಕ್ಕುಗಳನ್ನು ರಕ್ಷಿಸುವುದು ನ್ಯಾಯಾಲಯದ ಕರ್ತವ್ಯ. ಇಲ್ಲಿ ಸಮಾಜದ ಅಥವಾ ಮೂರನೇ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಸಮಾಜವು ಯಾವುದನ್ನಾದರೂ 'ಅನೈತಿಕ' ಎಂದು ಕರೆದ ತಕ್ಷಣ ಅದು ಅಪರಾಧವಾಗುವುದಿಲ್ಲ. ಕಾನೂನಿನ ಪುಸ್ತಕದಲ್ಲಿ ಅದು ಅಪರಾಧ ಎಂದು ದಾಖಲಾಗದ ಹೊರತು ನ್ಯಾಯಾಲಯವು ಶಿಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ನೀಡಿದೆ.
ಮಹಿಳೆಯು ತನ್ನ ಸ್ವಂತ ಇಚ್ಛೆಯಿಂದ ಆ ವ್ಯಕ್ತಿಯೊಂದಿಗೆ ವಾಸಿಸುತ್ತಿರುವುದಾಗಿ ಪೊಲೀಸರೊಂದಿಗೆ ಹೇಳಿದ್ದಾರೆ. ಆದರೆ, ಆಕೆಯ ಕುಟುಂಬದಿಂದ ಮರ್ಯಾದಾ ಹತ್ಯೆಯ ಬೆದರಿಕೆಗಳಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವುದನ್ನು ಅರಿತುಕೊಂಡ ನ್ಯಾಯಾಲಯವು ಅವರಿಬ್ಬರಿಗೂ ರಕ್ಷಣೆ ನೀಡುವುದು ಪೊಲೀಸರ ಕರ್ತವ್ಯ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ನ್ಯಾಯಾಲಯವು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ದಂಪತಿಗಳ ಮೇಲೆ ಸಮಾಜ ಅಥವಾ ಕುಟುಂಬದ ಸದಸ್ಯರಿಂದ ದೈಹಿಕ ಹಲ್ಲೆ ನಡೆಯುವ ಸಾಧ್ಯತೆಯನ್ನು ಮನಗಂಡ ನ್ಯಾಯಪೀಠವು, ಏಪ್ರಿಲ್​ 8 ಕ್ಕೆ ವಿಚಾರಣೆ ಮುಂದೂಡಿದ್ದು, ದಂಪತಿಗಳಿಗೆ ರಕ್ಷಣೆ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ತಕ್ಷಣವೇ ನೋಟಿಸ್ ಜಾರಿ ಮಾಡಿದೆ.
ಸಂಬಂಧಿತ ಕ್ರಿಮಿನಲ್ ಪ್ರಕರಣಕ್ಕೆ ಮಧ್ಯಂತರ ಪರಿಹಾರ ನೀಡಿದ ಪೀಠವು ಅರ್ಜಿದಾರರಾದ ಅನಾಮಿಕ ಮತ್ತು ನೇತ್ರಪಾಲ್​ ಅವರನ್ನು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಬಾರದು ಎಂದು ಆದೇಶ ನೀಡಿದೆ.
ಆದಾಗ್ಯೂ, ಮಹಿಳೆಯ ಕುಟುಂಬವು ದಂಪತಿಗಳಿಗೆ ಯಾವುದೇ ರೀತಿಯಲ್ಲಿ ಹಾನಿ ಮಾಡಬಾರದು ಜೊತೆಗೆ ಅವರನ್ನು ಸಂಪರ್ಕಿಸಬಾರದು ಎಂದು ತಿಳಿಸಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net